ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಸಹಚರರಿಗೆ ಸದ್ಯಕ್ಕೆ ಜಾಮೀನು ಸಿಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ 14 ದಿನಗಳ ಕಾಲ ವಿಸ್ತರಿಸಿದ್ದು, ದಾಸನ ಗ್ಯಾಂಗ್ ಆಗಷ್ಟ್ 01ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.
ಇತ್ತ ನಟ ದರ್ಶನ್ರನ್ನು ನೋಡಲು ಅವರ ಆಪ್ತರು ಹಾಗೂ ಕುಟುಂಬಸ್ಥರು ಪ್ರತಿದಿನ ಜೈಲಿಗೆ ಭೇಟಿ ನೀಡುತ್ತಿದ್ದು, ಇಂದು (ಜುಲೈ 19) ನಟ, ನಿರ್ದೇಶಕ ತರುಣ್ ಸುಧೀರ್ ಭೇಟಿಯಾಗಿ ಮದುವೆ ಆಮಂತ್ರಣ ಪತ್ರವನ್ನು ನೀಡಿದ್ದಾರೆ. ನಟ ತರುಣ್ ಸುಧೀರ್ಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಥ್ ನೀಡಿದ್ದಾರೆ.
ದರ್ಶನ್ ಭೇಟಿ ಬಳಿಕ ಮಾತನಾಡಿದ ತರುಣ್, ನಟ ದರ್ಶನ್ ಅವರಿಗೆ ಹುಷಾರ್ ಇರಲಿಲ್ಲ. ಈಗ ಬೆಟ್ಟರ್ ಆಗಿದ್ದಾರೆ. ಪ್ರತಿದಿನ ಅವರಿಗೆ ಸಂಜೆ ವೇಳೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ಕ್ಲೈಮೇಟ್ ಚೇಂಜ್ನಿಂದಾಗಿ ಜ್ವರ ಬರುತ್ತಿತ್ತು. ಈಗ ರಿಕವರ್ ಆಗುತ್ತಿದ್ದಾರೆ. ಪ್ರತಿಬಾರಿ ನನ್ನನ್ನು ಭೇಟಿಯಾದಾಗ ಯಾವ ರೀತಿ ಮಾತನಾಡಿಸುತ್ತಿದ್ದರೋ ಅದೇ ರೀತಿ ರಿಯಾಕ್ಟ್ ಮಾಡಿದರು. ಅವರು ಅರೆಸ್ಟ್ ಆಗಿರುವುದರಿಂದ ನಾವು ಮೆಂಟಲಿ ವೀಕ್ ಆಗಿದ್ದೇವೆ. ಭೇಟಿ ವೇಳೆ ಅವರ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಯಾಯ್ತು. ಏನಿಲ್ಲ ಮಗನೇ ಆರಾಮವಾಗಿ ಇದ್ದಿನಿ ಸ್ವಲ್ಪ ಜ್ವರ ಇತ್ತು ಅಷ್ಟೇ ಎಂದು ಹೇಳಿದರು.
ನನ್ನ ಮದುವೆ ವಿಚಾರ ಅವರಿಗೆ ಮೊದಲೇ ಗೊತ್ತಿತ್ತು. ಅವರಿಲ್ಲದೆ ಮದುವೆ ಆಗುತ್ತಿದ್ದೀನಿ ಎಂಬ ಕೊರಗು ಇದೆ. ಏನಿಲ್ಲಾ ನಿಶ್ಚಯ ಮಾಡಿಸಿರುವ ದಿನಾಂಕದಂದೇ ಮದುವೆಯಾಗು ಯಾವುದೇ ಕಾರಣಕ್ಕೂ ಡೇಟ್ ಚೇಂಜ್ ಮಾಡಬೇಡ ಎಂದರು. ಅಷ್ಟೊತ್ತಿಗೆ ನಾನು ಬರ್ತಿನಿ ಅಂದ್ರು. ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ಇದ್ದೀವಿ. ನಾನು ಪ್ರತಿಬಾರಿಯೂ ದೇವರಲ್ಲಿ ಅದನ್ನೇ ಬೇಡಿಕೊಳ್ಳುತ್ತಿದ್ದೇನೆ.
ಸ್ಪೆಷಲ್ ರಿಕ್ವೆಸ್ಟ್ ಮೇಲೆ ನಿಮ್ಮ ಮದುವೆಗೆ ನಟ ದರ್ಶನ್ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ ಅಷ್ಟೊತ್ತಿಗೆ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗ್ತಾರೆ. ಇನ್ವಿಟೇಷನ್ ಕೊಡುವುದಕ್ಕೆ ಅವಕಾಶ ಇಲ್ಲ ಎಂದರು. ಹಾಗಾಗಿ ಅವರ ಆಶೀರ್ವಾದ ಪಡೆದುಕೊಂಡೆ. ಜನರಲ್ ಆಗಿ ಸಿನಿಮಾ ಇಂಡಸ್ಟ್ರಿ ಬಗ್ಗೆ ಚರ್ಚೆ ಮಾಡಿದ್ವಿ. ಯಾವಾಗಲೂ ಅವರಿಗೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಕಾಳಜಿ ಇದೆ. ಜೈಲು ಊಟ ಅಡ್ಜಸ್ಟ್ ಆಗ್ತಿಲ್ಲ ಎಂದರು, ಇಂದು ವಿಚಾರಣೆ ನಡೆಯುತ್ತಿದ್ದು, ಏನಾಗುತತ್ತೋ ಕಾದು ನೋಡಬೇಕಿದೆ. ಮೇಲ್ನೋಟಕ್ಕೆ ಸ್ವಲ್ಪ ತೂಕ ಕಳೆದುಕೊಂಡು ಸಣ್ಣಗಾದಂತೆ ಕಾಣುತ್ತಿದ್ದಾರೆ ಎಂದು ನಟ, ನಿರ್ದೇಶಕ ತರುಣ್ ಸುಧೀರ್ ದರ್ಶನ್ ಭೇಟಿ ಬಳಿಕ ಹೇಳಿದ್ದಾರೆ.