ನ್ಯೂಸ್

ರೇಣುಕಸ್ವಾಮಿ ಕೊಲೆ ಪ್ರಕರಣ; ಆರೋಪಿ ದರ್ಶನ್ ಜಾಮೀನು ರದ್ದುಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿಕೆ | Actor Darshan

ಮೋಹನ್​ ಶೆಟ್ಟಿ

Actor Darshan: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್​ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದುಕೋರಿ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಇದೀಗ ಸುಪ್ರೀಂ ಕೋರ್ಟ್​ ಮತ್ತೇ ಮುಂದೂಡಿಕೆ.

ಎ1 ಪವಿತ್ರಾಗೌಡ ಮತ್ತು ಎ2 ಆರೋಪಿ ದರ್ಶನ್​ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ ಪರ ವಕೀಲರು, ಜಾಮೀನು ರದ್ದುಗೊಳಿಸುವಂತೆ ಕೋರ್ಟ್​ಗೆ ಮನವಿ ಮಾಡಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ದ್ವಿಸದಸ್ಯ ಪೀಠವು, ವಿಚಾರಣೆಯನ್ನು ಇದೇ ಜುಲೈ 22ಕ್ಕೆ ಮುಂದೂಡಿದೆ.

ಸರ್ಕಾರ ಪರ ವಕೀಲರಿಗೆ 'ಸುಪ್ರೀಂ' ಸೂಚನೆ!

ಅರೆಸ್ಟ್ ಕುರಿತಾದ ಕಾರಣಗಳಷ್ಟನ್ನೇ ನಾವು ಕೇಳಿದ್ದೇವೆ. ಬಂಧನ ಕಾನೂನು ಬದ್ಧವಾಗಿಲ್ಲ ಎನ್ನುವುದಾಗಿದೆ. ಇದಕ್ಕೆ ಉತ್ತರ ಕೊಡಿ ಎಂದು ಆರೋಪಿಗಳ ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ ಪರ ವಕೀಲರಿಗೆ ಕೋರ್ಟ್​ ಸೂಚಿಸಿದೆ.ಈಗಾಗಲೇ ದರ್ಶನ್​ ಬಂಧನದ ದಾಖಲೆಯನ್ನು ಸರ್ಕಾರ ಸಲ್ಲಿಕೆ ಮಾಡಿದೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆಯಲ್ಲಿ ತೀರ್ಪು ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.