ಬೆಂಗಳೂರು: ಕಾಂತಾರ ಸಿನಿಮಾ ಬಿಡುಗಡೆ ಆದಾಗಿನಿಂದ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಚೇತನ್ ಇದೀಗ ಮತ್ತೊಂದು ವಿವಾದಾತ್ಮಕ ವಿಚಾರದ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.
ಇವರು, ತಮ್ಮ ಫೇಸ್ಬುಕ್ ಗೋಡೆಯ ಮೇಲೆ 'ಬ್ರಾಹ್ಮಣ ಮತ್ತು ಗಂಡಸು ಆಗಿ ‘ಆಕಸ್ಮಿಕವಾಗಿ' ಜನಿಸಿದವರೆಲ್ಲರೂ ಒಂದೇ ಆಗಿರುವುದಿಲ್ಲ.
ಉದಾರವಾದಿ ಬ್ರಾಹ್ಮಣ ಪುರುಷರು ಅಧಿಕಾರಕ್ಕಾಗಿ 1885 ರಲ್ಲಿ ಕಾಂಗ್ರೆಸ್ ಅನ್ನು ಪ್ರಾರಂಭಿಸಿದರು
ಹಿಂದುತ್ವ ಬ್ರಾಹ್ಮಣ ಪುರುಷರು ಸುಳ್ಳು ಇತಿಹಾಸದ ಮೇಲೆ 1925 ರಲ್ಲಿ RSS ನ್ನು ಪ್ರಾರಂಭಿಸಿದರು
ಕಮ್ಯುನಿಸ್ಟ್ ಬ್ರಾಹ್ಮಣ ಪುರುಷರು ಆರ್ಥಿಕ ಬದಲಾವಣೆಗಾಗಿ 1925 ರಲ್ಲಿ ಸಿಪಿಐ ಅನ್ನು ಪ್ರಾರಂಭಿಸಿದರು
ಸಮಾನತವಾದಿ ಬ್ರಾಹ್ಮಣ ಪುರುಷರು ನಿಜವಾದ ನ್ಯಾಯಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡಬೇಕು, ಹೋರಾಡಬೇಕು ಮತ್ತು ದೇಶ ನಿರ್ಮಿಸಬೇಕು!' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಸಾಕಷ್ಟು ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಜನರು ಕಾಮೆಂಟ್ ವಿಭಾಗದಲ್ಲಿ ನಟ ಚೇತನ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚೇತನ್ ಅಹಿಂಸಾ ಅವರ ಪೋಸ್ಟ್ ನೋಡಲು ಇಲ್ಲಿ ಒತ್ತಿ.