ನ್ಯೂಸ್

ಬೆಕ್ಕು ದಾಳಿ : ನಟಿ ಊರ್ಫಿ ಜಾವೆದ್​ ಮುಖದಲ್ಲಿ ರಕ್ತಸ್ರಾವ !| Uorfi Javed

Uorfi Javed: ಇನ್ನ ಫ್ಯಾಷನ್​ ಲುಕ್​ ಹಾಗೂ ಆಗ್ಗಾಗೆ ತನ್ನ ದಿಟ್ಟ ಹೇಳಿಕೆಯಿಂದ ಹೆಸರುವಾಸಿಯಾಗಿರುವ ನಟಿ, ಪ್ರಭಾವಿ ಊರ್ಫಿ ಜಾವೆದ್​ ಇತ್ತೀಚೆಗೆ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅವರ ಮನೆಯ ಬೆಕ್ಕು ಆಕೆಯ ಮುಖದ ಮೇಲೆ ದಾಳಿ ಮಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಆಕೆಯ ಕಣ್ಣಿನ ಕೆಳಗೆ ರಕ್ತ ಸೋರುತ್ತಿರುವಂತಹ ದೃಶ್ಯವನ್ನು ನಾವು ನೋಡಬಹುದಾಗಿದೆ.

ಆಕೆಯು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸೋಫಾದ ಮೇಲೆ ಕುಳಿತಿದ್ದಾಗ ಅವಳ ಬೆಕ್ಕು ಇದ್ದಕ್ಕಿದ್ದಂತೆ ತನ್ನ ಮುಖಕ್ಕೆ ಗಾಯ ಮಾಡಿದೆ ಎಂದು ವ್ಯಕ್ತಪಡಿಸುವ ಟಿಪ್ಪಣಿಯನ್ನು ಹಂಚಿಕೊಂಡಿದ್ದಾಳೆ. ಇನ್ನು ಚಿತ್ರದಲ್ಲಿ ಊರ್ಫಿ ಮುಖದಲ್ಲಿ ರಕ್ತಸ್ರಾವವಾಗುತ್ತಿತ್ತು. ಇದು ಅಭಿಮಾನಿಗಳನ್ನು ಕಳವಳಗೊಳಿಸಿದೆ.

ಇನ್ನು ತನ್ನ ಖಾತೆಯಲ್ಲಿ ಹಂಚಿಕೊಳ್ಳುವಾಗ ಊರ್ಫಿ "ಬೆಕ್ಕಿನ ಫೋಷಕರೇ, ನೀವು ಹೇಳಬಲ್ಲಿರಾ? ಸೋಪಾದಲ್ಲಿ ಕುಳಿತಾಗ ನನ್ನ ಬೆಕ್ಕು ಆಕಸ್ಮಿಕವಾಗಿ ಬಂದು ನನ್ನ ಮುಖವನ್ನು ಕಚ್ಚಿದೆ ಎಂದು ಬರೆದಿದ್ದಾಳೆ. ಇನ್ನು ವಿಡಿಯೋದಲ್ಲಿ ತನ್ನ ಬೆಕ್ಕಿನ ಮೇಲೆ ಕೂಗುತ್ತಾ, "ಯೇ ಕ್ಯಾ ಕಿಯಾ ತುಮ್ನೆ? ಬಹೋತ್ ಬಡತಮಿಜ್ ಹೋ ಗಯೇ ಹೋ" (ಹೇ ನೀನು ಏನು ಮಾಡಿದ್ದಿಯಾ? ತುಂಬಾ ಅಸಭ್ಯವಾಗಿ ವರ್ತಿಸಿದ್ದೀಯಾ )ಎಂದು ಹೇಳುತ್ತಾಳೆ.

ಊರ್ಫಿ ಜಾವೆದ್​ ಶೋಗಳು

ಊರ್ಫಿ ಮೊದಲು ಧಾರವಾಹಿಗಳೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಬಡೇ ಭೈಯಾ ಕಿ ದುಲ್ಹನಿಯಾ, ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ, ಕಸೌತಿ ಜಿಂದಗಿ ಕೇ 2 ಮತ್ತು ಇತರ ಕೆಲವು ಪ್ರಸಿದ್ಧ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದರು. ನಂತರ ತನ್ನದೇ ಆದ ವಿಶಿಷ್ಟ ಉಡುಪುಗಳನ್ನು ಧರಿಸಿ ಕಾಣಿಸಿಕೊಂಡ ನಂತರ ಮನೆಮಾತಾದರು.

ಊರ್ಫಿ ಜಾವೆದ್ ಸಂಬಂಧ

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಊರ್ಫಿ ನಾನು ಸಂಬಂಧದಲ್ಲಿದ್ದೇನೆ ಎಂದು ಬಹರಂಗಪಡಿಸಿದ್ದಾಳೆ. ಅವನು ಇಲ್ಲಿಯವನಲ್ಲ, ದೆಹಲಿಯವನು. ಅವನು ಎಷ್ಟೇ ದೂರ ಇದ್ದರೂ ವಿಮಾನದಲ್ಲಿ 2 ಗಂಟೆಗಳ ಪ್ರಯಾಣ ಹಾಗಾಗಿ ನನ್ನ ಗೆಳೆಯನನ್ನು ನೋಡಲು ವಾರಾಂತ್ಯದಲ್ಲಿ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದ್ದರು.(ಏಜೆನ್ಸೀಸ್​)