Katrina Kaif : ಬಾಲಿವುಡ್‌ನ ಪ್ರೀತಿಯ ದಂಪತಿಗಳಲ್ಲಿ ಒಬ್ಬರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್, ಬಹಳ ದಿನಗಳ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಅಧಿಕೃತವಾಗಿ ನಿನ್ನೆ (ಸೆ.23) ಘೋಷಿಸಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ಖ್ಯಾತ ನಟ ಅಕ್ಷಯ್ ಕುಮಾರ್ ದಂಪತಿಗಳಿಗೆ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸಿ, ವಿಶೇಷವಾದ ಬೇಡಿಕೆ ಇಟ್ಟಿದ್ದಾರೆ.
ನಿನ್ನೆ ಕತ್ರಿನಾ ಮತ್ತು ವಿಕ್ಕಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂಬ ಶುಭ ಸುದ್ದಿಯನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳನ್ನು ಸಂತೋಷಪಡಿಸಿದರು. ಕತ್ರಿನಾ ಈ ಸುದ್ದಿಗೆ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಂದ ಅಭಿನಂದನಾ ಸಂದೇಶಗಳ ಪ್ರವಾಹವೇ ಹರಿದು ಬಂದಿದ್ದು, ಎಲ್ಲರೂ ಕೂಡ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಇನ್ನೂ ಇದರಲ್ಲಿ ನಟ ಅಕ್ಷಯ್ ಕುಮಾರ್ ಕೂಡ ಒಬ್ಬರಾಗಿದ್ದಾರೆ.
ಕತ್ರಿನಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಕ್ಷಯ್, ಕತ್ರಿನಾ ಮತ್ತು ವಿಕ್ಕಿ ನಿಮಗೆ ತುಂಬಾ ಸಂತೋಷವಾಗಿದೆ. ನೀವಿಬ್ಬರೂ ಅತ್ಯುತ್ತಮ ಪೋಷಕರಾಗುತ್ತೀರಿ ಎಂದು ನಾನು ಹೇಳಬಲ್ಲೆ ಎಂದು ಬರೆದಿದ್ದಾರೆ. ಜೊತೆಗೆ ಅವರು ತಮಾಷೆಯ ಟಿಪ್ಪಣಿಯೊಂದಿಗೆ, ದಯವಿಟ್ಟು ನಿಮ್ಮ ಮಗುವಿಗೆ ಇಂಗ್ಲಿಷ್ ಮತ್ತು ಪಂಜಾಬಿ ಕಲಿಸಿ, ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದಗಳು ನಿಮ್ಮ ಮೇಲಿರಲಿ ಜೈ ಮಹಾದೇವ್ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
(ಏಜೆನ್ಸೀಸ್)
2019 ರಲ್ಲಿ ಚಾಟ್ ಶೋವೊಂದರಲ್ಲಿ ಕಾಣಿಸಿಕೊಂಡ ನಂತರ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ನಡುವೆ ಮೊದಲ ಸಂಬಂಧ ಹುಟ್ಟಿಕೊಂಡಿತು. ಅಲ್ಲಿ ವಿಕಿ ತಮಾಷೆಯಾಗಿ ಅವರಿಗೆ ಪ್ರಪೋಸ್ ಮಾಡಿದರು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ವಿಕಿ ಕ್ಯಾಟ್ ಹೆಸರನ್ನು ಉಲ್ಲೇಖಿಸುತ್ತಿರುವುದು ಕಂಡುಬಂದಿತು. ಪ್ರಶಸ್ತಿ ಸಮಾರಂಭವೊಂದರಲ್ಲಿ ಅವರು ತಮಾಷೆಯಾಗಿ ಅವರಿಗೆ ಪ್ರಪೋಸ್ ಮಾಡಿದರು. ಇಬ್ಬರೂ ತಮ್ಮ ಸಂಬಂಧವನ್ನು ಹೆಚ್ಚಾಗಿ ಖಾಸಗಿಯಾಗಿ ಇಟ್ಟುಕೊಂಡಿದ್ದರೂ, ಪಾರ್ಟಿಗಳು ಮತ್ತು ಕುಟುಂಬ ಕೂಟಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಊಹಾಪೋಹಗಳಿಗೆ ಕಾರಣವಾಯಿತು. ಡಿಸೆಂಬರ್ 9, 2021 ರಂದು, ಕತ್ರಿನಾ ಮತ್ತು ವಿಕ್ಕಿ ವಿವಾಹವಾದರು. ಈ ವಿವಾಹದಲ್ಲಿ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು. ಇದೀಗ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.