ನ್ಯೂಸ್

ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ನಟ ಅಜಿತ್ ಕುಮಾರ್  ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಅವರನ್ನು ವಿಐಪಿ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ ಎಂದು ವರದಿಯಾಗಿದೆ.

ವಿದೇಶ ಪ್ರಯಾಣ ಹಾಗೂ ಬೈಕ್ ಏರಿ ಪ್ರವಾಸಕ್ಕೆ ಹೋಗುವ ಮುಂಚೆ ನಟ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಅಜಿತ್ ಸಾಕಷ್ಟು ಬಾರಿ ಈ ರೀತಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿದ್ದಾರೆ. ಇದು ಕೂಡ ಅದೇ ರೀತಿ ಆಗಿರಬಹುದು ಎಂದು ವರದಿಯಾಗಿದೆ.

ಅಜಿತ್ ಕುಮಾರ್  ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಅವರನ್ನು ವಿಐಪಿ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ ಎಂದು ವರದಿಯಾಗುತ್ತಿದ್ದಂತೆ, ನಟ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ನಟ ಅಜಿತ್ ಕುಮಾರ್ ಚೆನ್ನೈನಲ್ಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಗನ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದರು.

ತಮಿಳಿನಲ್ಲಿ ವಿಡಾ ಮುಯಾರ್ಚಿ ಎಂದರೆ ದೃಢಸಂಕಲ್ಪ,. ಚಿತ್ರಕ್ಕೆ ನೀರವ್ ಶಾ ಅವರ ಛಾಯಾಗ್ರಹಣವಿದೆ. ಅಜಿತ್ ಅವರ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೀರವ್ ಛಾಯಾಗ್ರಹಣ ನಿಭಾಯಿಸಿದ್ದಾರೆ.