ಮುಂಬೈ: ನಟಿ ತಾಪ್ಸಿ ಪನ್ನು ತನ್ನ ಪತಿ, ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋ ಬಗ್ಗೆ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ.
ಮಥಿಯಾಸ್ ಮೊದಲು ಪ್ರಪೋಸ್ ಮಾಡಿದಾಗ ನನಗೆ ಹಲವು ಅನುಮಾನಗಳಿದ್ದವು. ಆತನ ಜೊತೆ ಫಸ್ಟ್ ಡೇಟ್ ಗೆ ಹೋದಾಗ ಫ್ರೆಂಡ್ಸ್ ತುಂಬಾ ಕನ್ ಫ್ಯೂಸ್ ಆಗಿದ್ದರು ಎಂದರು.
"ನಾವು ಸುಮಾರು 11 ವರ್ಷದ ಹಿಂದೆ ಮೊದಲ ಬಾರಿಗೆ ಭೇಟಿಯಾದೆವು. ಒಂದು ವರ್ಷದ ನಂತರ, ನಮ್ಮ ನಡುವೆ ಪ್ರೀತಿ ಚಿಗುರೊಡೆಯಿತು. ಅಲ್ಪಾವಧಿಯಲ್ಲಿ ನಾವು ಸಂಬಂಧವನ್ನು ಗಟ್ಟಿಗೊಳಿಸಿಕೊಂಡೆವು. ಬಳಿಕ ಮದುವೆಗೆ ನಿರ್ದರಿಸಿದೆವು. ಸುಮಾರು ಒಂಬತ್ತು ವರ್ಷದಿಂದ ಒಟ್ಟಿಗೆ ಜೀವಿಸುತ್ತಿದ್ದೇವೆ. ನಾವು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ನಾವು ನಮ್ಮ ಮನಸ್ಸನ್ನು ಬದಲಾಯಿಸಲಿಲ್ಲ. ನಾವು ನಮ್ಮ ಜೀವನದುದ್ದಕ್ಕೂ ಒಟ್ಟಿಗೆ ಇರಬೇಕೆಂದು ನಿರ್ದರಿಸಿದ್ದೆವು ಎಂದು ತನ್ನ ಸಂಗಾತಿಯ ಬಗ್ಗೆ ತಾಪ್ಸಿ ಹೇಳಿಕೊಂಡಿದ್ದಾರೆ.
ಮಥಿಯಾಸ್ ಡೆನ್ಮಾರ್ಕ್ಗೆ ಸೇರಿದ ವ್ಯಕ್ತಿ. ಆತನಿಗೆ ಡೆನ್ಮಾರ್ಕ್, ದುಬೈ ಮಾತ್ರ ಗೊತ್ತು. ನಮ್ಮ ಮೊದಲ ಡೇಟಿಂಗ್ಗೆ ದುಬೈಗೆ ಕರೆದಿದ್ದ. ಇದನ್ನು ನಾನು ನನ್ನ ಸ್ನೇಹಿತೆಯರಿಗೆ ಹೇಳಿದ್ದೆ. ಅವರು ಹುಷಾರಾಗಿರು, ದುಬೈನಲ್ಲಿ ಶೇಕ್ಗಳಿಗೆ ಮಾರಿಬಿಟ್ಟಾನು ಎಂದಿದ್ದರು. ಇದು ಆತನೊಂದಿಗೆ ಮೊದಲು ಡೇಟಿಂಗ್ಗೆ ಹೋದಾಗ ನಾನು ಆಶ್ಚರ್ಯ, ಆತಂಕಕ್ಕೊಳಗಾಗಿದ್ದೆ. ಗೆಳತಿಯೊಬ್ಬಳು ತನ್ನ ದುಬೈನಲ್ಲಿರುವ ಅಕ್ಕನ ಮೊಬೈಲ್ ಸಂಖ್ಯೆಯನ್ನು ಕೊಟ್ಟು, ಏನಾದರೂ ತೊಂದರೆಯಾದರೆ ಕರೆ ಮಾಡಲು ತಿಳಿಸಿದ್ದಳು ಎಂದಿದ್ದಾರೆ ತಾಪ್ಸಿ.
ತಾಪ್ಸಿ- ಮಥಿಯಾಸ್ ದೀರ್ಘಕಾಲದ ರಿಲೇಷನ್ಷಿಪ್ನಲ್ಲಿದ್ದು, ಕಳೆದ ಮಾ.23ರಂದು ಮತ್ತೆ ಮದುವೆಯಾಗಿದ್ದಾರೆ.