ನ್ಯೂಸ್

ಜಾಲಿ ರೈಡ್​​ಗಾಗಿ ಕಳ್ಳರ ಕೈಚಳಕ; ದುಬಾರಿ ಬೈಕ್​ಗಳೇ ಇವರ ಟಾರ್ಗೆಟ್

ಬೆಂಗಳೂರು: ಪರ್ಸ್​​ನಲ್ಲಿ ದುಡ್ಡು, ಕೈಯ್ಯಲ್ಲೊಂದ ಕಾಸ್ಟ್ಲಿ ಮೊಬೈಲ್ ಮತ್ತು ಐಷಾರಾಮಿ ಬೈಕ್. ಇಷ್ಟಿದ್ದರೆ ಸಾಕು ಮೋಜು, ಮಸ್ತಿ ಮಾಡಲು. ಬಹುತೇಕರು ಒಂದ್ಸಲ ಬೈಕ್​ನಲ್ಲಿ ಲಾಂಗ್ ರೈಡ್ ಹೋಗ್ಬೇಕು, ಫ್ರೆಂಡ್ಸ್ ಜತೆ ಜಾಲಿ ರೈಡ್ ಹೋಗ್ಬೇಕು ಅಂತಾ ಕನಸು ಕಟ್ಕೊಂಡಿರ್ತಾರೆ. ಆದರೆ ಇಲ್ಲಿಬ್ಬರು ಯುವಕರು ಬೈಕ್​ಗಳನ್ನು ಕದ್ದು ಜಾಲಿ ರೈಡ್ ಹೋಗಿಬಂದಿದ್ದಾರೆ.

ಸದ್ಯ ಕೊತ್ತನೂರು ಪೊಲೀಸರು ಜಾಲೀ ರೈಡ್​ ಮಾಡಲೆಂದು ಐಷಾರಾಮಿ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶಾಂತ್ ಮತ್ತು ಮೊಹಮ್ಮದ್ ರೋಷನ್ ಬಂಧಿತ ಆರೋಪಿಗಳು. ಇವರಿಬ್ಬರಿಗೆ ಬೈಕ್​ನಲ್ಲಿ ಜಾಲೀ ರೈಡ್ ಹೋಗುವ ಹುಚ್ಚು. ಇದಕ್ಕಾಗಿ ರಾತ್ರಿ ವೇಳೆ ದುಬಾರಿ ಬೆಲೆಯ ಬೈಕ್​​ಗಳ ಕಳ್ಳತನ ಮಾಡುತ್ತಿದ್ದರು. ಅದರಲ್ಲೂ ರಾಮಮೂರ್ತಿನಗರ, ಕೆ ಆರ್ ಪುರಂ ಭಾಗದಲ್ಲಿ ಹೆಚ್ಚಾಗಿ ತಮ್ಮ ಕೈಚಳಕ ತೋರಿಸುತ್ತಿದ್ದರು. ನಂತರ ಜಾಲೀ ರೈಡ್ ಹೋಗಿ ಮೋಜು, ಮಸ್ತಿಯಲ್ಲಿ ತೊಡಗುತ್ತಿದ್ದರು.

ರಾಯಲ್ ಎನ್​ಫೀಲ್ಡ್, ಡ್ಯೂಕ್, ಅಪ್ಪಾಚ್ಚಿ, ಹಿಮಾಲಯನ್, ಡಾಮಿನಾರ್ ಮುಂತಾದ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ‌ ಮಾಡುತ್ತಿದ್ದರು. ಒಂದು ಬಾರಿ ಜಾಲೀ ರೇಡ್ ಹೋಗಿ ಬಂದ ಬಳಿಕ ಬೈಕ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ 11 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.