ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಸಬ್ ಇನ್ಸ್ಪೆಕ್ಟರ್ ಮೇಲೆ ಆರೋಪಿಯೊಬ್ಬ ದಾಳಿ ಮಾಡಿರುವ ಆತಂಕಕಾರಿ ಘಟನೆ ಪೀಣ್ಯ ಠಾಣೆಯಲ್ಲಿ ನಡೆದಿದೆ.
ಸಿದ್ದು ಹೂಗಾರ ದಾಳಿಗೆ ಒಳಗಾದ ಸಬ್ ಇನ್ಸ್ಪೆಕ್ಟರ್. ಪೊಲೀಸ್ ಠಾಣೆಯ ಬಾಗಿಲಲ್ಲೇ ಕಾಲಲ್ಲಿ ಒದ್ದು ಎಸ್ಐ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆ ಇಂದು ಬೆಳಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇದನ್ನೂ ಓದಿ: ಆನ್ಲೈನ್ ಜಾಬ್ ಇಂಟರ್ವ್ಯೂವ್ ಹಿಂದೆ ಗೋಮುಖ ವ್ಯಾಘ್ರಗಳು: ಸ್ವಲ್ಪ ಯಾಮಾರಿದ್ರು ನರಕಯಾತನೆ ಫಿಕ್ಸ್!
ಬಸ್ ನಿಲ್ಲಿಸುವ ಸಂಬಂಧ ಗಲಾಟೆ ಶುರುವಾಗಿತ್ತು. ಗಲಾಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಲಾಗಿತ್ತು. ಈ ವೇಳೆ ಠಾಣೆಯಲ್ಲೆ ಎಸ್ಐ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.
ಗಾಯಗೊಂಡಿರುವ ಎಸ್ಐ ಸಿದ್ದು ಹೂಗಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯ ಠಾಣೆಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಎಸ್ಐ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಹಸ್ತಕ್ಷೇಪ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)