ನ್ಯೂಸ್

ಕಾರು-ಸರ್ಕಾರಿ ಬಸ್‌ ನಡುವೆ ಅಫಘಾತ; 6 ಮಂದಿ ಮೃತ್ಯು, ಇಬ್ಬರು ಗಂಭೀರ

ಕೊಡಗು: ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆ ಕೊಡಗು ಸಂಪಾಜೆಯ ಪೆಟ್ರೋಲ್ ಪಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ.

ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಇಬ್ಬರು ಮಕ್ಕಳಲ್ಲಿ ಒಂದು ಮಗು ಮೂರು ವರ್ಷ ಪ್ರಾಯದ್ದೆಂದು ತಿಳಿದು ಬಂದಿದೆ.ಸಾವಿನ ಸಂಖ್ಯೆ ಏರುತ್ತಲೆ ಇದ್ದು, ಸಾವಿಗೀಡಾದವರೆಲ್ಲ ಮಂಡ್ಯ ಮೂಲದವರೆಂದು ತಿಳಿದು ಬಂದಿದೆ.

ಕಾರು ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.