ನ್ಯೂಸ್

ಲೋಕಸಭೆಯ ಟಿಎಂಸಿ ನಾಯಕನಾಗಿ ಅಭಿಷೇಕ್​​ ಬ್ಯಾನರ್ಜಿ ನೇಮಕ | TMC Leader

TMC Leader: ತೃಣಮೂಲ ಕಾಂಗ್ರೆಸ್​ (ಟಿಎಂಸಿ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಸಿಎಂ ಮಮತಾ ಬ್ಯಾಜರ್ಜಿ ಅಳಿಯ ಅಭಿಷೇಕ್​ ಬ್ಯಾನರ್ಜಿ ಅವರನ್ನು ಪಕ್ಷ ಲೋಕಸಭೆಯ ಸದನದ ನಾಯಕನನ್ನಾಗಿ ನೇಮಿಸಿದೆ ಎಂದು ಸೋಮವಾರ ವರದಿಯಾಗಿದೆ.

ಪಕ್ಷದ ಹಿರಿಯ ಮುಖಂಡ ಹಾಗೂ ಉತ್ತರ ಕೋಲ್ಕತ್ತಾದ ಸಂಸದ ಸುದೀಪ್​ ಬಂಡೋಪಾಧ್ಯಾಯ ಈ ಹಿಂದೆ ಸದನದ ನಾಯಕರಾಗಿದ್ದರು. ಅವರಿಗೆ ಅನಾರೋಗ್ಯ ಕಾರದಿಂದಾಗಿ ಇದೀಗ ಆ ಸ್ಥಾನದಿಂದ ಹಿಂದೆ ಸರಿದ್ದಾರೆ. ಈ ಹಿನ್ನೆಲೆ ಅಭಿಷೇಕ್​  ಬ್ಯಾನರ್ಜಿ ನೇಮಕಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪಕ್ಷದ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಟಿಎಂಸಿ ಸಂಸದರ ವರ್ಚುವಲ್​​ ಮೀಟಿಂಗ್​ನಲ್ಲಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ.

ಟಿಎಂಸಿ ಲೋಕಸಭೆಯಲ್ಲಿ 29 ಸ್ಥಾನಗಳನ್ನು ಹೊಂದಿದ್ದು, ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾಗಿದೆ.(ಏಜೆನ್ಸೀಸ್​)