

Smriti Irani : ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಎಂಬ ದೂರದರ್ಶನ ಧಾರಾವಾಹಿಯ ತುಳಸಿ ವಿರಾನಿ ಪಾತ್ರಕ್ಕೆ ಫೇಮಸ್ ಆದ ನಟಿ ಕಮ್ ರಾಜಕಾರಣಿ ಸ್ಮೃತಿ ಇರಾನಿ, ಇದೀಗ ಮತ್ತೊಮ್ಮೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮ ಎರಡನೇ ಸೀಸನ್ ಆರಂಭವಾಗಿದ್ದು, ಅವರ ಅಭಿಮಾನಿಗಳಿಗೆ 25 ವರ್ಷದ ಹಳೆಯ ನೆನಪುಗಳನ್ನು ಮರುಕಳಿಸಿದೆ.
25 ವರ್ಷಗಳ ಬಳಿಕವೂ ಈಗ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ತುಳಸಿ ಪಾತ್ರ ಹೊರತುಪಡಿಸಿ ಸ್ಮೃತಿ ಇರಾನಿ ಅವರ ಕುಟುಂಬದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಇದೀಗ, ಅವರ ಕುಟುಂಬ ಮತ್ತು ಪತಿಯ ಬಗ್ಗೆ ತಿಳಿಯೋಣ..
2001ರಲ್ಲಿ ಸ್ಮೃತಿ ಇರಾನಿ ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಉದ್ಯಮಿ ಜುಬಿನ್ ಇರಾನಿ ಅವರನ್ನು ವಿವಾಹವಾದರು. ಜುಬಿನ್ ಒಬ್ಬ ಪಾರ್ಸಿಯಾಗಿದ್ದು, ಆತನಿಗೆ ಆದಾಗಲೇ ಮದುವೆಯಾಗಿ ಓರ್ವ ಮಗಳಿದ್ದಳು. ಜುಬಿನ್ ಸ್ಮೃತಿ ಇರಾನಿ ಹಳೆ ಸ್ನೇಹಿತನಾಗಿದ್ದರಿಂದ ಇಬ್ಬರ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತು.
ತನ್ನ ಆರಂಭಿಕ ದಿನಗಳಲ್ಲಿ ಜುಬೆನ್ ತನಗೆ ಸಾಕಷ್ಟು ಬೆಂಬಲ ನೀಡಿದ್ದರು ಎಂದು ಸ್ಮೃತಿ ಈ ಹಿಂದೆಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿನಿಯಲ್ಲಿ ತುಳಿಸಿ ಪಾತ್ರ ಸಿಕ್ಕಾಗ ಅವರು(ಜುಬೆನ್) ಸಂತೋಷಪಟ್ಟಿದ್ದರು. ಅಲ್ಲದೆ, ಈ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆ ಸಿಕ್ಕರೂ, ಅವರು ನನ್ನ ಕೈ ಬಿಡಲಿಲ್ಲ. ಸದಾ ಜೊತೆಗಿದ್ದರು ಎಂದಿದ್ದಾರೆ ಸ್ಮೃತಿ.
2001ರಲ್ಲಿ ಸರಳ ಮದುವೆಯಾದ ಸ್ಮೃತಿ, ಜುಬೆನ್ ಮಾತ್ರವಲ್ಲದೆ ಅವರ ಪುತ್ರಿಯನ್ನು ಕೂಡ ದತ್ತು ಪಡೆದರು. ಇದಲ್ಲದೆ, ಮದುವೆಯ ನಂತರ, ಸ್ಮೃತಿ ಮತ್ತು ಜುಬಿನ್ ದಂಪತಿಗೆ ಜೋಹರ್ (2001) ಮತ್ತು ಜೋಶ್ (2003) ಎಂಬ ಇಬ್ಬರು ಮಕ್ಕಳಿದ್ದಾರೆ.
ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಸೆಟ್ನಲ್ಲಿ ಗರ್ಭಪಾತವಾಗಿದ್ದರೂ ಮರುದಿನ ಶೂಟಿಂಗ್ ಕರೆಸಲಾಯಿತು. ಈ ಕಷ್ಟದ ಸಮಯದಲ್ಲಿ ಕೂಡ ಜುಬೆನ್ ನನ್ನ ಪರ ನಿಂತಿದ್ದನು. ಅಲ್ಲದೆ, ನಾನು ನಟನೆ ಬಿಟ್ಟು ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಾಗ ಜುಬೆನ್ ಬಲವಾಗಿ ನನ್ನ ಜತೆ ನಿಂತಿದ್ದರು ಎಂದು ಸ್ಮೃತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಎರಡನೇ ಸೀಸನ್ ಆರಂಭವಾಗಿದ್ದು, ಅವರ ಅಭಿಮಾನಿಗಳಿಗೆ 25 ವರ್ಷದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. (ಏಜೆನ್ಸೀಸ್)