ಬೆಂಗಳೂರು: ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇತ್ತೀಚೆಗಷ್ಟೇ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು. ಇದೀಗ ಇನ್ನೂ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.
ಸರ್ಕಾರಿ ಶಾಲೆಗಳ ಮೇಲೆ ಕಣ್ಣಿಟ್ಟಿರುವ ಸುದೀಪ್, ಅವುಗಳ ಅಭಿವೃದ್ಧಿಗೆ ಕಿಚ್ಚ ಪಣ ತೊಟ್ಟಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬೆಲ್ ಸೊಸೈಟಿ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿನ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಆವಿಗೆ ಹಳ್ಳಿ, ಹಾಳಸಸಿ, ಎಸ್.ಎನ್ ಬಡಾವಣೆ ಸಾಗರ, ಎಲ್.ಎಲ್ ಹಳ್ಳಿ ಸಾಗರ ಸೇರಿ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ.
ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್ ಮೂಲಕ ಒದಗಿಸಲಿದ್ದಾರೆ.
ಇದನ್ನೂ ಓದಿ: ಅಭಯಾರಣ್ಯದಲ್ಲಿ ದರ್ಶನ್ ಸಫಾರಿ
ಮಾರ್ಚ್ ತಿಂಗಳಲ್ಲೇ ಶಾಲೆಗಳನ್ನು ದತ್ತು ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಕರೊನಾ ಬಂದಿದ್ದರಿಂದ ದತ್ತು ಪಡೆಯುವ ಕೆಲಸ ಆಗಿರಲಿಲ್ಲ. ಇದೀಗ ಇನ್ನೇನು ಸೆಪ್ಟಂಬರ್ನಲ್ಲಿ ಶಾಲೆಗಳು ಪುನಾರಾಂಭ ಆಗೋ ಸಾಧ್ಯತೆ ಇರುವುದರಿಂ ದತ್ತು ಪಡೆಯಲಾಗಿದೆ.