Bollywood: ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಉತ್ತಮ ಪ್ರದರ್ಶನ ಕಂಡ ನಂತರ ಅಕ್ಷಯ್ ಕುಮಾರ್, ರಜತ್ ಶರ್ಮಾ ಅವರ ಆಪ್ ಕಿ ಅದಾಲತ್‌ನಲ್ಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಟ್ವಿಂಕಲ್ ಖನ್ನಾ ಅವರೊಂದಿಗಿನ ದಾಂಪತ್ಯದಲ್ಲಿ ಆಮಿರ್ ಖಾನ್ ಏಕೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಬಾಬಿ ಡಿಯೋಲ್, ಬರ್ಸಾತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಟ್ವಿಂಕಲ್ ಖನ್ನಾ ದೀರ್ಘಾವಧಿಯವರೆಗೂ ನಟನೆಯನ್ನು ಮುಂದುವರೆಸಲಿಲ್ಲ. ಇವರು ತಮ್ಮ ನಟನಾ ವೃತ್ತಿಯನ್ನು ತೊರೆಯುವ ಮುನ್ನ ಯಾವುದೇ ವಿಷಾದವನ್ನು ಹೊರಪಡಿಸಲಿಲ್ಲ.
ಇದನ್ನೂ ಓದಿ: ಟ್ರಂಪ್ ಸುಂಕಗಳಿಗೆ ಭಾರತ ತಕ್ಷಣ ಏಕೆ ಪ್ರತಿಕ್ರಿಯಿಸಲಿಲ್ಲ? ರಕ್ಷಣಾ ಸಚಿವ ಹೇಳಿದ್ದೇನೆ..! Trump’s tariffs
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ 2000ರಲ್ಲಿ ಧರ್ಮೇಶ್ ದರ್ಶನ್ ಅವರ ಮೇಳ ಚಿತ್ರದಲ್ಲಿ ಬಿಡುಗಡೆಯಾಗುವ ಸಮಯದಲ್ಲಿದ್ದಾಗ ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಹಾಗಾಗಿ ಮದುವೆಯಾಗೋಣವೇ? ಎಂದು ಪ್ರಶ್ನೆ ಮಾಡಿದೆ. ಆದರೆ, ಅವಳಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಾಗಿ ಮೇಳ ಸಿನಿಮಾ ಹಿಟ್ ಆಗದಿದ್ದರೆ ಮದುವೆಯಾಗುವುದಾಗಿ ಷರತ್ತು ಹಾಕಿದ್ದಳು. ಮೇಳ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಎಲ್ಲರೂ ನಂಬಿದ್ದರು. ಏಕೆಂದರೆ ಇದು ಆಮೀರ್ ಖಾನ್ ಚಿತ್ರ ಹಾಗೆಯೇ ಧರ್ಮೇಶ್ ದರ್ಶನ್ ನಿರ್ದೇಶಕರಾಗಿದ್ದರು ಎಂದು ಅಕ್ಷಯ್ ನೆನಪಿಸಿಕೊಂಡರು.
ಆದರೆ ವಿಧಿಯಂತೆ, ಮೇಳ ಬಾಕ್ಸ್ ಆಫೀಸ್ನಲ್ಲಿ ಸೋತಿತು. "ಕ್ಷಮಿಸಿ ಅಮೀರ್ ಖಾನ್ ಸಾಹಬ್ ನಿಮ್ಮ ಆ ಚಿತ್ರ ಯಶಸ್ವಿಯಾಗಲಿಲ್ಲ. ಆದರೆ ನಾನು ನಿಮ್ಮಿಂದಾಗಿ ಮದುವೆಯಾಗಿದ್ದೇನೆ ಎಂದು ವ್ಯಂಗ ನುಡಿದರು. ಈ ಸಂಭಾಷಣೆಯ ವೇಳೆ ಮದುವೆಯ ದಿನದಂದು ಸಂಜೆ 6 ಗಂಟೆಯವರೆಗೆ ಅವರು ಪ್ರತ್ಯೇಕವಾಗಿ ಚಿತ್ರೀಕರಣ ನಡೆಸುತ್ತಿದ್ದೆ. ಅದು ಪ್ಯಾಕ್ ಅಪ್ ನಂತರ ಅವರ ಸ್ನೇಹಿತನ ಮನೆಯ ಟೆರಸ್ ಮೇಲೆ ಮದುವೆಯಾಗಿರುವುದಾಗಿ ತಿಳಿಸಿದರು.
ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಅವರಿಬ್ಬರು ವಿಭಿನ್ನವಾಗಿ ಯೋಚಿಸುವುದರ ಬಗ್ಗೆ ಅಕ್ಷಯ್ ತಿಳಿಸಿದ್ದಾರೆ. ಟ್ವಿಂಕಲ್ ಆದಷ್ಟು ನಕಾರಾತ್ಮಕ ಯೋಚಿಸಿದರೆ, ನಾನು ಧನಾತ್ಮಕವಾಗಿ ಯೋಚಿಸುತ್ತೇನೆ ಎಂದು ಹೇಳಿದರು. ಇನ್ನು ನಮ್ಮಿಬ್ಬರ ನಡುವೆ ಒಂದೇ ಸಾಮಾನ್ಯ ಗುಣವಿದೆ ಅದ್ಯಾವುದು ಅಂದರೆ, ಬೇಗ ಮಲಗಿ ಬೇಗ ಏಳುವುದನ್ನು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ.
ಇದರಿಂದ ನಮ್ಮ ಜೀವನ ತುಂಬಾ ಸರಳವಾಗಿದೆ. ನಮ್ಮಿಬ್ಬರಿಗೆ ಸಿನಿಮಾ ನೋಡುವುದು ಇಷ್ಟ. ಪಾರ್ಟಿ ಹಾಗೂ ಹೊರಗಡೆ ಹೋಗಲು ಕಷ್ಟ. ಆದರಿಂದ ವಿಷಯಗಳು ಕ್ರಮೇಣವಾಗಿ ಹೋಲಿಕೆಯಾಗುತ್ತವೆ. ಹೇಗೆಂದರೆ ಶೇ. 20 ರಷ್ಟು ಮಾತ್ರ ನಮ್ಮಿಬ್ಬರಿಗೆ ಹೋಲಿಕೆಯಾದರೆ ಶೇ. 80ರಷ್ಟು ಅಸಮಾನತೆಗಳೇ ಎದ್ದು ಕಾಣುತ್ತವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)