ನ್ಯೂಸ್

"ನನ್ನ ಅಭಿನಯ ಚೆನ್ನಾಗಿಲ್ಲ..ನನ್ನಿಂದಾಗಿಯೇ 'ಲಾಲ್ ಸಿಂಗ್'ಗೆ ಸೋಲು": ಅಮೀರ್ ಖಾನ್ ಹೀಗೆಂದಿದ್ದಕ್ಕೆ ನೆಟ್ಟಿಗರು ಏನಂದ್ರು ನೋಡಿ..

ಮುಂಬೈ: ನನ್ನಿಂದಾಗಿಯೇ 'ಲಾಲ್ ಸಿಂಗ್ ಚಡ್ಡಾ' ಸೋತಿದೆ. ಚಿತ್ರದ ಸೋಲಿಗೆ ನಾನೇ ಪ್ರಮುಖ ಕಾರಣ ಎಂದು ನಟ ಅಮೀರ್ ಖಾನ್

ಹೇಳಿದ್ದಾರೆ.

ಮೊದಲು ಉತ್ತಮ ಕೆಲಸ ಮಾಡಿದ್ದು ವರ್ಕೌಟ್ ಆಗಿದೆ ಎಂದಿದ್ದ ಅಮೀರ್​ ಖಾನ್​, ಈಗ ತಾನು ಅಗತ್ಯಕ್ಕಿಂತ ಹೆಚ್ಚಾಗಿ ನಟನೆ ಮಾಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ತಪ್ಪು ಒಪ್ಪಿಕೊಂಡರು. ಆದರೆ ಈ ಸೋಲು ತನ್ನ ನಟನೆಯಲ್ಲಿ ಬದಲಾವಣೆ ತಂದಿದೆ. ಮುಂದೆ ಅಭಿನಯವನ್ನು ಸುಧಾರಿಸಿಕೊಳ್ಳಬೇಕಿದೆ ಎಂದು ಸಾಮಾಜಿಕ ಮಾಧ್ಯಮ ದರು.

ಅಮೀರ್ ಖಾನ್ ಮಹತ್ವಾಕಾಂಕ್ಷೆಯ ಥಗ್ಸ್ ಆಫ್ ಹಿಂದೂಸ್ತಾನ್ ಮತ್ತು ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಹೊಂದಿದ್ದು ತಿಳಿದ ಸಂಗತಿಯೇ. ಆ ಸಿನಿಮಾ ಮೇಕಿಂಗ್ ಸಮಯದಲ್ಲಿಯೂ ತನಗೆ ಇಷ್ಟವಿಲ್ಲದಿದ್ದರೂ ನಿರ್ದೇಶಕರ ಸೂಚನೆಯಂತೆ ಶಕ್ತಿ ಮೀರಿ ನಟಿಸಬೇಕಾಯಿತು.

ಇನ್ನು ಲಾಲ್ ಸಿಂಗ್ ಚಡ್ಡಾ ವಿಷಯಕ್ಕೆ ಬಂದರೆ ನನ್ನ ಅಭಿನಯದಿಂದ ಸಿನಿಮಾ ಸೋತಿದೆ ಎಂದಿದ್ದಾರೆ. ನನ್ನ ಅಭಿನಯವು ಅಪೇಕ್ಷಣೀಯವಾಗಿದೆ ಎಂದು ತೋರುತ್ತದೆ. ಪಿಚ್ ಲೆವೆಲ್ ಹೆಚ್ಚಿದ್ದು, ಓವರ್ ಆ್ಯಕ್ಷನ್ ನಂತಿದೆ ಎಂದರು.

ಅಲ್ಲದೇ ಅಮೀರ್ ಅಭಿನಯದಿಂದ ಮಾತ್ರ ಚಿತ್ರ ಸೋತಿಲ್ಲ. ಅವರು ಫ್ಲಾಪ್ ಅನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಿರುವುದು ಗ್ರೇಟ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಹೊಗಳುತ್ತಿದ್ದಾರೆ. ಆದರೆ ನನ್ನ ಅಭಿನಯವೇ ಚಿತ್ರದ ಪ್ಲಾಪ್ ಗೆ ಕಾರಣ, ನನ್ನ ತಪ್ಪುಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ನಾನು ಮುಂದೆ ಯಶಸ್ವಿಯಾಗಬಹುದು ಎಂದಿದ್ದಾರೆ.

ಅಮೀರ್ ಖಾನ್​, ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ನಂತರ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಇದೀಗ ಅವರು ಜಮೀನ್ ಪರ್ ನ ಸೀಕ್ವೆಲ್ ಅನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ. ಇದರ ಮೂಲಕವಾದರೂ ಅಮೀರ್ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.