ನ್ಯೂಸ್

ಈಗ ಮನೆಯಲ್ಲೆ ಕುಳಿತು ಉಚಿತವಾಗಿ ಆಧಾರ್ ಕಾರ್ಡ್​​ ಅಪ್ಡೇಟ್​​​ ಮಾಡಬಹುದು! ಹೇಗೆ ಅಂತೀರಾ? ಈ ವಿಡಿಯೋ ನೋಡಿ..

ಬೆಂಗಳೂರು: ಆಧಾರ್​ ಕಾರ್ಡ್​ ಇದು ಶ್ರೀಸಾಮಾನ್ಯನ ಅಧಿಕಾರ! ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗು ಈ ವಿಶೇಷವಾದ 12 ಯುಐಡಿಎಐ ಸಂಖ್ಯೆಯನ್ನು ನೀಡಲಾಗಿರುತ್ತದೆ. ಆಧಾರ್​ ನಮ್ಮ ದೈನಂದಿನ ಕೆಲಸ ಸೇರಿದಂತೆ ಹಲವಾರು ಬಹುಮುಖ್ಯ ದಾಖಲಾತಿಗಳಿಗೆ ಅಗತ್ಯ ಡಾಕ್ಯುಮೆಂಟ್​ ಆಗಿದೆ. ಇದರಿಂದ ಸರ್ಕಾರಿ ಅರ್ಜಿಗಳು, ಪೋರ್ಟಲ್​​ ಸೇವೆಗಳು, ವಾಹನ ಪರವಾನಗಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.

ಅತೀ ಮುಖ್ಯವಾಗಿ ಆಧಾರ್​ ಕಾರ್ಡ್​ನ ಸೇವೆಗಳು ಗ್ರಾಮೀಣ ಭಾಗದಲ್ಲಿನ ಜನಸಾಮಾನ್ಯರಿಗೆ ಹೆಚ್ಚು ಉಪಯೋಗವಾಗುತ್ತಿದೆ. ರೇಷನ್​ ತೆಗೆದುಕೊಳ್ಳಲು, ಬ್ಯಾಂಕ್​ನಿಂದ ಸಾಲ ಪಡೆಯಲು, ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಗಳಿಸಲು ಪಟ್ಟಣ ಪ್ರದೇಶಗಳಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ಈ ಆಧಾರ್​ ಕಾರ್ಡ್​ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಈ ಮಧ್ಯೆ ಇದೀಗ ಕೇಂದ್ರ ಸರ್ಕಾರ ದೇಶದ ಜನತೆಗೆ ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಪ್ರತಿಯೊಬ್ಬರು ತಮ್ಮ ಆಧಾರ್​ ಕಾರ್ಡ್​ ಅನ್ನು ನವೀಕರಿಸಿಕೊಳ್ಳಲು ಹೊಸ ಗಡುವನ್ನು ಕೊಟ್ಟಿದೆ. ಇದನ್ನು ಹೇಗೆ ಮಾಡೋದು? ಮಾಹಿತಿಯನ್ನು ಸುಲಭವಾಗಿ ತಿಳಿಸಿಕೊಡುವ ಯಾವುದಾದರೂ ವಿಡಿಯೋ ಇದೆಯಾ? ಎಂಬ ಪ್ರಶ್ನೆಗೆ ವಿಜಯವಾಣಿ ತಂಡ ಸರಳವಾಗಿ ವಿವರಿಸಿರುವ ಉಪಯುಕ್ತ ಮಾಹಿತಿಯ ವಿಡಿಯೋ ಲಿಂಕ್ ಕೆಳಗಿದೆ, ಕ್ಲಿಕ್ ಮಾಡಿ ವೀಕ್ಷಿಸಿ.