ನ್ಯೂಸ್

18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಇನ್ನು ಒಂದು ವರ್ಷ ಆಧಾರ್ ನೀಡುವುದಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ|Himanta Sharma

Himanta Sharma: ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಚಹಾ ತೋಟದ ಕೆಲಸಗಾರರನ್ನು ಹೊರತುಪಡಿಸಿ,18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಆಧಾರ್ ಕಾರ್ಡ್‌ಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ (ಆಗಸ್ಟ್​,21) ಘೋಷಿಸಿದ್ದಾರೆ.

ಗಡಿ ಭದ್ರತೆ ಮತ್ತು ಅಕ್ರಮ ವಲಸೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶರ್ಮಾ, ನಾವು ನಿರಂತರವಾಗಿ ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿಯುದ್ದಕ್ಕೂ ಹಿಂದಕ್ಕೆ ತಳ್ಳಿದ್ದೇವೆ. ಅಕ್ರಮ ವಿದೇಶಿಗರು ಅಸ್ಸಾಂ ರಾಜ್ಯಕ್ಕೆ ಪ್ರವೇಶಿಸಿ ಭಾರತೀಯ ಪ್ರಜೆ ಎಂದು ಹೇಳಿಕೊಳ್ಳುವ ಮೂಲಕ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.ಅಲ್ಲದೆ ನಾವು ನಮ್ಮ ಜನರಿಗೆ ರಕ್ಷಣೆ ಬಯಸುತ್ತೇವೆ ಹಾಗೂ ಈಗಾ ಈ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೆ, ಅಸ್ಸಾಂ ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಿದರು, ಎಸ್‌ಟಿ, ಎಸ್‌ಸಿ ಮತ್ತು ಚಹಾ ತೋಟದ ಕೆಲಸಗಾರರನ್ನು ಹೊರತುಪಡಿಸಿ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಅನ್ನು ಇನ್ನೂ ಒಂದು ವರ್ಷದವರೆಗೆ ನೀಡಲಾಗುವುದಿಲ್ಲ ಎಂದು ಅಸ್ಸಾಂ ಸಚಿವ ಸಂಪುಟ ಇಂದು ನಿರ್ಧರಿಸಿದೆ ಹಿಮಂತ ಶರ್ಮಾ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಶರ್ಮಾ, ಆಧಾರ್ ಪಡೆಯದ ಇತರ ಸಮುದಾಯಗಳ ಜನರಿಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಅಲ್ಲದೆ, ಆಧಾರ್ ನೋಂದಣಿಯನ್ನು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಅಪರೂಪದ ಪ್ರಕರಣಗಳಲ್ಲಿ, ವಿಂಡೋ ಅವಧಿ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿಗಳು ಆಧಾರ್ ಕಾರ್ಡ್ ನೀಡುವ ಅಧಿಕಾರ ಹೊಂದಿರುತ್ತಾರೆ ಮತ್ತು ಆಧಾರ್ ಕಾರ್ಡ್ ನೀಡುವ ಮೊದಲು ಜಿಲ್ಲಾಧಿಕಾರಿಗಳು ಎಸ್‌ಬಿ ವರದಿ, ವಿದೇಶಿಯರ ನ್ಯಾಯಮಂಡಳಿ ವರದಿಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)