Aadhaar Card: ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಆಧಾರ್ ಕಾರ್ಡ್ ಬಹುಮುಖ್ಯ ದಾಖಲಾತಿ. ಕೇವಲ ಆಧಾರ್ ಒಂದರಿಂದಲೇ ಉಳಿದೆಲ್ಲ ದಾಖಲಾತಿಗಳನ್ನು ಮಾಡಿಸಿಕೊಳ್ಳಬಹುದು. ಆ ಮಟ್ಟಿಗೆ ಈ ಕಾರ್ಡ್ ಉಪಯುಕ್ತವಾಗಿದೆ. ವಿಶೇಷವಾಗಿ ಸರ್ಕಾರಿ ಯೋಜನೆಗಳಿಂದ ಹಿಡಿದು ವೈಯಕ್ತಿಕ ಅಗತ್ಯಗಳವರೆಗೆ ಎಲ್ಲದಕ್ಕೂ ಆಧಾರ್ ಕಡ್ಡಾಯವಾಗಿದೆ.
ಇದನ್ನೂ ಓದಿ: ನಿಮಗಿಂತ ಅನಿಲ್ ಕುಂಬ್ಳೆಯೇ ಉತ್ತಮ… ಟೀಮ್ ಇಂಡಿಯಾದ ಸ್ಟಾರ್ ಬೌಲರ್ ವಿರುದ್ಧ ಸಿಧು ಆಕ್ರೋಶ! IND vs ENG
ಬ್ಯಾಂಕ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆ ಹಾಗೂ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅತ್ಯಗತ್ಯ. ನಿರ್ದಿಷ್ಟವಾಗಿ ಹೇಳುವುದಾದರೆ, ಬ್ಯಾಂಕ್ ಖಾತೆಗಳು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು, ಪ್ಯಾನ್ ಕಾರ್ಡ್, ಪಡಿತರ ಚೀಟಿ, ಎಲ್‌ಪಿಜಿ ಸಂಪರ್ಕಗಳಂತಹ ವಿವಿಧ ಸೇವೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಇಂದಿನ ದಿನಗಳಲ್ಲಿ ಕಡ್ಡಾಯವಾಗಿದೆ.
ವರದಿಗಳ ಪ್ರಕಾರ, ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನೀವು ಸಬ್ಸಿಡಿಗಳು ಮತ್ತು ಸರ್ಕಾರಿ ಯೋಜನೆಯಿಂದ ದೊರೆಯುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಬ್ಯಾಂಕ್‌ನೊಂದಿಗೆ ಆಧಾರ್ ಲಿಂಕ್ ಮಾಡಲು, ಕೆಲವು ದಾಖಲೆಗಳ ಅಗತ್ಯವಿದೆ. ಇದರಲ್ಲಿ ಆಧಾರ್, ವಿಳಾಸ ಪುರಾವೆ, ಪಾಸ್‌ಬುಕ್ ಪ್ರತಿ ಸೇರಿವೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನೀಡಲಾದ ಫಾರ್ಮ್ ಭರ್ತಿ ಮಾಡಿ, ಅರ್ಜಿ ಸಲ್ಲಿಸಿ.
ಇದನ್ನೂ ಓದಿ: 2ನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಕಣಕ್ಕೆ!? ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸ್ಪಷ್ಟನೆ | Rishabh Pant
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಜೋಡಣೆ ಮಾಡಲು, ನೀವು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ಕೊಡಬೇಕು. ನಿಮ್ಮ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ನಮೂದಿಸಿ ಮತ್ತು ಅವುಗಳನ್ನು OTP ಮೂಲಕ ಪರಿಶೀಲಿಸಿ. ಪಡಿತರ ಚೀಟಿ, ಎಲ್‌ಪಿಜಿಗಾಗಿ ಮುಖ ದೃಢೀಕರಣ KYCಗಾಗಿ ಆಧಾರ್ ಫೇಸ್‌ಆರ್‌ಡಿ ಅಪ್ಲಿಕೇಶನ್ ಬಳಸಿ. ನೀವು ಅದೇ ವಿಧಾನದ ಮೂಲಕ ನಿಮ್ಮ ಇ-ಕೆವೈಸಿ ಸ್ಟೇಟಸ್ ಅನ್ನು ಸಹ ಪರಿಶೀಲಿಸಬಹುದು.
ಪೋಷಕರು ತಮ್ಮ ಮಕ್ಕಳ ಆಧಾರ್ ಬಯೋಮೆಟ್ರಿಕ್‌ಗಳನ್ನು ಶೀಘ್ರವೇ ನವೀಕರಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. 7 ವರ್ಷ ತಲುಪಿದ ಮಕ್ಕಳು ತಮ್ಮ ಆಧಾರ್ ಬಯೋಮೆಟ್ರಿಕ್‌ಗಳನ್ನು ನವೀಕರಿಸುವಂತೆ ಕೇಳಿದೆ. 7 ವರ್ಷ ಪೂರ್ಣಗೊಂಡ ನಂತರವೂ ಮಗುವಿನ ಬಯೋಮೆಟ್ರಿಕ್‌ಗಳನ್ನು ಆಧಾರ್‌ನಲ್ಲಿ ನವೀಕರಿಸಿಕೊಳ್ಳಬೇಕು ಎಂದು ಕಡ್ಡಾಯಗೊಳಿಸಿದೆ.
ವರದಿಯ ಪ್ರಕಾರ, ಬಯೋಮೆಟ್ರಿಕ್ ನವೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಗುವಿನ ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳಿಗೆ ಎಸ್ಎಂಎಸ್ (SMS) ಕಳುಹಿಸುತ್ತಿದೆ ಎಂದು ಯುಐಡಿಎಐ ತಿಳಿಸಿದೆ. ಐಟಿ ಸಚಿವಾಲಯದ ಹೇಳಿಕೆಯ ಪ್ರಕಾರ, ಪೋಷಕರು ಯಾವುದೇ ಆಧಾರ್ ಸೇವಾ ಕೇಂದ್ರ ಅಥವಾ ಇತರ ಆಧಾರ್ ದಾಖಲಾತಿ ಕೇಂದ್ರಗಳಲ್ಲಿ ತಮ್ಮ ಮಗುವಿನ ಆಧಾರ್‌ಗಾಗಿ ವಿವರಗಳನ್ನು ನವೀಕರಿಸಬಹುದಾಗಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಪೋಷಕರ ಗುರುತಿನ ಪುರಾವೆ ದಾಖಲೆಗಳೊಂದಿಗೆ ಆಧಾರ್‌ಗಾಗಿ ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಪೋಷಕರು ಸ್ಥಳೀಯ ಸೇವಾ ಕೇಂದ್ರಗಳಲ್ಲಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು,(ಏಜೆನ್ಸೀಸ್).