ನ್ಯೂಸ್

ಇಡಿ ಅಧಿಕಾರಿಗಳ ವಶಕ್ಕೆ ಜಮೀರ್​! ಕಂಟಕವಾಗುತ್ತಾ ಆ ಒಂದು ಹಗರಣ?

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​ ಅವರನ್ನು ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್​ ಬಳಿ ಇರುವ ಜಮೀರ್ ಅಹ್ಮದ್ ಅವರ ಐಷಾರಾಮಿ ಬೃಹತ್​ ಬಂಗಲೆ, ಶಾಂತಿ ನಗರದಲ್ಲಿರುವ ಮನೆ, ಚಾಮರಾಜಪೇಟೆಯಲ್ಲಿರುವ ಸ್ವಂತ ಕಚೇರಿ, ಪ್ಲ್ಯಾಟ್‌ಗಳು, ಬಂಬೂ ಬಜಾರ್ ಬಳಿಯ ಮನೆ, ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಕಚೇರಿ... ಸೇರಿ ಹಲವಡೆ ಏಕಕಾಲಕ್ಕೆ ದಾಳಿ ನಡೆದಿ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.

ಬಹುಕೋಟಿ ವಂಚನೆ ಐಎಂಎ ಹಗರಣ ಸಂಬಂಧ ಜಮೀರ್​ ಮನೆ ಮೇಲೆ ಇಡಿ ದಾಳಿ ಆಗಿದೆ ಎನ್ನಲಾಗಿದೆ. ಶಾಸಕ ಜಮೀರ್​ನನ್ನು ವಶಕ್ಕೆ ಪಡೆದ ಇಡಿ, ಜಮೀರ್ ಬಳಿಯಿದ್ದ ಮೊಬೈಲ್ ಅನ್ನೂ ವಶಕ್ಕೆ ಪಡೆದಿದ್ದಾರೆ.

ಐಎಂಎ ಹಗರಣದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಜಮೀರ್ ವಿರುದ್ಧ ಐಎಂಎ ಮಾಲೀಕ ಮನ್ಸೂರ್​ ಅಲಿ ಖಾನ್​ ಆರೋಪ ಮಾಡಿದ್ದ. ಮನ್ಸೂರ್​ ಜತೆ ಜಮೀರ್​ಗೆ ವ್ಯವಹಾರವಿದ್ದ ಶಂಕೆ ವ್ಯಕ್ತವಾಗಿದೆ.