ಚೈನ್ನೈ:ರೈಲ್ವೆ ಹಳಿಗಳ ನಡುವೆ ಕಳೆದುಹೋದ ತನ್ನ ಇಯರ್ ಫೋನ್ಗಳನ್ನು(Earphones )ಹುಡುಕುತ್ತಿದ್ದ 19ರ ಯುವಕನ ಮೇಲೆ ಟ್ರೈನ್ ಹರಿದು ಮೃತಪಟ್ಟಿರುವ ಘಟನೆ ಇಲ್ಲಿನ ಕೋಡಂಬಾಕ್ಕಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ವಿಲ್ಲುಪುರಂ ಜಿಲ್ಲೆಯ ಚಿನ್ನಸೆಲಂ ಬಳಿ ಇರುವ ಸೊರತುರಿನವರಾದ ಕಾಲೇಜು ವಿದ್ಯಾರ್ಥಿ ರಾಜಗೋಪಾಲ್(19) ಮೃತ. ಚೈನ್ನೈನ ನಂದನ ಕಲಾ ಸರ್ಕಾರಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ನಲ್ಲಿ ವಾಸವಾಗಿದ್ದನು. ಕಾಲೇಜು ಸಮಯದ ಬಳಿಕ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದನು.
ಇದನ್ನೂ ಓದಿ:ಮದುವೆ ನಿರಾಕರಿಸುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Supreme Court
ಶನಿವಾರ ಕೆಲಸಕ್ಕೆ ತೆರಳುವಾಗ ಟ್ರೈನ್ ಇಳಿದು ಹಳಿ ದಾಡಬೇಕಾದ ತನ್ನ ಇಯರ್ಫೋನ್ ಕೆಳಗೆ ಬಿದ್ದು ಕಳೆದಿದೆ. ಇದನ್ನು ಸಲ್ಪಹೊತ್ತು ಅಲ್ಲೆ ಹುಡುಕಾಟ ಮಾಡುತ್ತಿದ್ದಾಗ ಮತ್ತೊಂದು ರೈಲು ಇತನ ಮೈ ಮೇಲೆ ಹರಿದೆ.ಇದರ ಪರಿಣಾಮ ರಾಜಗೋಪಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)