ನ್ಯೂಸ್

ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿ ಮೇಲೆ ಗುಂಡು ಹಾರಿಸಿದ ಯುವಕ! | Proposal

ಉತ್ತರ ಪ್ರದೇಶ: ಮದುವೆ ಪ್ರಸ್ತಾಪವನ್ನು(Proposal) ನಿರಾಕರಿಸಿ ತನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದ ಯುವತಿ ಮೇಲೆ ಯುವಕನೊಬ್ಬ ಗುಂಡು ಹಾರಿಸಿದ ಘಟನೆ ಗುರಾಂಗಾವ್​ನ ದುಂಡಹೇರಾ ಪ್ರದೇಶದಲ್ಲಿ ಗುರುವಾರ(ಅ.24) ನಡೆದಿದೆ.

ಉತ್ತರ ಪ್ರದೇಶದ ಜೌನ್‌ಪುರದ ನಿವಾಸಿಯಾದ ಆರೋಪಿ ವಿಪಿನ್(33), ಪ್ರತಾಪ್‌ಗಢದ ನಿವಾಸಿ ಶಿವಾಂಗಿ (25) ಕೆಲಸಕ್ಕೆ ತೆರಳುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಿದ್ದಾನೆ. ವಿಪಿನ್‌ನನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ದಾಳಿಗೆ ಬಳಸಲಾದ ದೇಶೀಯ ಪಿಸ್ತೂಲನ್ನು ಆತನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭುಜಕ್ಕೆ ಗುಂಡೇಟಿನಿಂದ ಗಾಯಗೊಂಡಿದ್ದ ಶಿವಾಂಗಿಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)