ನ್ಯೂಸ್

20 ನಿಮಿಷದಲ್ಲಿ ಎರಡು ಫುಲ್​ಬಾಟಲ್​​ ವಿಸ್ಕಿ ಕುಡಿದ ಯುವಕ! ಮುಂದೇನಾಯ್ತು ಗೊತ್ತೇ?

ಥಾಯ್ಲೆಂಡ್: ಇಲ್ಲಿನ ಸೋಷಿಯಲ್​​ ಮೀಡಿಯಾ ಪ್ರಭಾವಿ ಯುವಕನೊಬ್ಬ ಕೇವಲ 20 ನಿಮಿಷಗಳಲ್ಲಿ ಎರಡು ಪುಲ್​ ಬಾಟಲ್​​ ವಿಸ್ಕಿ ಕುಡಿದ ಹಿನ್ನೆಲೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಲ್ಲಿ 'ಬ್ಯಾಂಕ್​ ಲಿಸೇಸ್ಟರ್​' ಎಂದು ಕರೆಯಲ್ಪಡುವ ಥಾಯ್ಲೆಂಡ್​​ ನಿವಾಸಿ ಥಾನಕರ್ನ್​​ ಕಾಂಥಿ(21) ಮೃತ ಯುವಕ. 21 ಬಾಟಲ್​​ಗಳನ್ನು ಕುಡಿಯಲು ಬೆಟ್ಟಿಂಗ್​ ಕಟ್ಡಿದ್ದ ಇತ, ಅದಾಗಲೇ ಕುಡಿದ್ದ, ಈ ಹಿನ್ನೆಲೆ ಏಕಾಏಕಿ 2 ಫುಲ್ ಬಾಟಲ್​ಗಳನ್ನು ಕೆಳಗಿಳಿಸದಂತೆ 20 ನಿಮಿಷಗಳಲ್ಲಿ ಕಡಿದ ಹಿನ್ನೆಲೆ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಎಬ್ಬಿಸಲು ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಲ್ಪಾವಧಿಯಲ್ಲಿ ಅಧಿಕ ಅಲ್ಕೋಹಾಲ್​ ಸೇವನೆಯಿಂದ ಅದು ದೇಹದಲ್ಲಿ ವಿಷವಾಗಿ ಹರಡಿ ಮೃತಪಟ್ಟಿರುವುದಾಗಿ ಎಂದು ವೈದ್ಯರ ತಂಡ ಮಾಹಿತಿ ಕೊಟ್ಟಿದ್ದಾರೆ.

ಮೃತ ಥಾನಕರ್ನ್​​ ಕಾಂಥಿ ಪರ ಮತ್ತು ವಿರುದ್ಧ ಬೆಟ್ಟಿಂಗ್​ ಕಟ್ಟಿದ್ದವರನ್ನು ಥಾಯ್​​ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರಿಂದ ಪಿಸ್ತೂಲ್​, ಬ್ಯಾಂಕ್​ ಪಾಸ್​​ಬುಕ್​​, ಮೊಬೈಲ್​​ ಪೋನ್​ ಮತ್ತು ಕೆಲವಷ್ಟು ಸಿಮ್​​ ಕಾರ್ಡ್​ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ತನಿಖೆ ವೇಳೆ ಬಂಧಿತರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಕೋರ್ಟ್​ನಲ್ಲಿದ್ದು, 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ಅಧಿಕ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕಾಂಥಿಯ ಸವಾಲು ಇದೇ ಮೊದಲಲ್ಲ!

ಮೃತ ಕಾಂಥಿ ಕುಡಿಯಲು ಬೆಟ್ಟಿಂಗ್​​ ಕಟ್ಟುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಇಂತಹ ಸಹಾಸಗಳು ಹಲವಾರು ಬಾರಿ ಮಾಡಿದ್ದಾನೆ. ಇತ್ತೀಚಿಗಷ್ಟೇ ಇತನ ಜನ್ಮದಿನ ಅಂಗವಾಗಿ 25 ಸಾವಿರ ಹಣಕ್ಕೆ 350 ಎಂಎಲ್​ ಪುಲ್​ಬಾಟಲ್​ ಕೆಲವೇ ನಿಮಿಷಗಳಲ್ಲಿ ಕುಡಿದು ಮುಗಿಸಿದ್ದಾನೆ ಎಂದು ಬ್ಯಾಂಕಕ್​​ ಪೋಸ್ಟ್​ ವರದಿ ಮಾಡಿದೆ.  ಇತನ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದು, ಇತನ ಪಾಲೋವರ್ಸ್​ ಮತ್ತು ನೆಟ್ಟಿಗರ ಬೆಚ್ಚಿಬಿದಿದ್ದಾರೆ. (ಏಜೆನ್ಸೀಸ್​)