ನ್ಯೂಸ್

ಬೆಂಗಳೂರು ವಿಮಾನ ನಿಲ್ದಾಣವನ್ನು ಕೊಂಡಾಡಿದ ಜಪಾನ್​ ಯುವತಿ! ಆಕೆ ಹೇಳಿದ ಮಾತುಗಳಿವು | Bangalore Airport

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Bangalore Airport) ಟರ್ಮಿನಲ್​ 2 ಕಣ್ತುಂಬಿಕೊಂಡ ಜಪಾನ್ ಮೂಲದ​ ಟ್ರಾವೆಲ್​​ ವ್ಲಾಗರ್ ಒಂದು ನಿಮಿಷ ಇಲ್ಲಿನ ಕಟ್ಟಡ ವಿನ್ಯಾಸಕ್ಕೆ ಮಾರುಹೋಗಿದ್ದಾರೆ. ಈ ಕುರಿತು ತಮ್ಮ ಅನುಭವವನ್ನು ಇನ್​ಸ್ಟಾಗ್ರಾಮ್​ ವಿಡಿಯೋದಲ್ಲಿ ಹಂಚಿಕೊಂಡಿರುವ ಅವರು, ವಿಡಿಯೋ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಮಾನ ಇಳಿದ ನಂತರ ಏರ್​ಪೋರ್ಟ್​ ಒಳಗೆ ಬಂದ ಜಪಾನ್​ನ ಕಿಕಿ ಚೆನ್​ ಎಂಬ ಯುವತಿ, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ​ ನಿಲ್ದಾಣದ ಆರ್ಕಿಟೆಕ್ಚರಲ್ ಕಡೆ ಕೈತೋರಿಸುತ ವಿವರಿಸಿದ್ದಾರೆ. ವಿಶ್ರಾಂತಿ ಸ್ಥಳ, ಪ್ರಯಾಣಿಕರ ಕಾಯುವಿಕೆ ಸ್ಥಳ ಮತ್ತು​ ರೂಮ್​ಗಳನ್ನು ಪರಿಶೀಲಿಸಿದ ಅವರು, ನನಗೆ ಇದನ್ನು ನೋಡಿ ಆಶ್ಚರ್ಯವಾಗುತ್ತಿದೆ. ಎಷ್ಟು ಚೆನ್ನಾಗಿದೆ ಇಲ್ಲಿನ ವಿನ್ಯಾಸ, ವಾಹ್​ ಎಂದು ಖುಷಿ ಹಂಚಿಕೊಂಡಿದ್ದಾರೆ.

''ಭಾರತದ ಅತ್ಯುತ್ಯಮ ವಿಮಾನ ನಿಲ್ದಾಣ ಇದು! ಚೆಕ್​ ಇನ್​ ಕೌಂಟರ್​ ಸೇರಿದಂತೆ ಎಲ್ಲವನ್ನೂ ಸಹ ಬಿದಿರಿನಿಂದ ನಿರ್ಮಿಸಲಾಗಿದೆ. ನಾನು ಭಾರತದ ವಿಮಾನ ನಿಲ್ದಾಣದಲ್ಲಿ ಇದ್ದೇನೆ ಎಂದು ನಿಜಕ್ಕೂ ನನ್ನಿಂದ ನಂಬಲಾಗುತ್ತಿಲ್ಲ ಎಂದು ತಮ್ಮ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರು ಚೆನ್​ ಅವರ ಮಾತುಗಳಿಗೆ ಫಿದಾ ಆಗಿದ್ದಾರೆ,(ಏಜೆನ್ಸೀಸ್).