ಎಡಗಣ್ಣು ಬದಲು ಬಲಗಣ್ಣಿಗೆ ಶ್ರಸ್ತ್ರ ಚಿಕಿತ್ಸೆ ಮಾಡಿ ಎಡವಟ್ಟು! ವೈದ್ಯನ ವಿರುದ್ಧ ದೂರು ದಾಖಲು | Eye treatment

Eye Treatment
Published on

ನೋಯ್ಡಾ: ಬಾಲಕನ ಎಡಗಣ್ಣಿನ ಬದಲು ಬಲಗಣ್ಣಿಗೆ ಶಸ್ತ್ರ ಚಿಕಿತ್ಸೆ(Eye treatment) ಮಾಡಿ ಡಾಕ್ಟರ್​ ಒಬ್ಬ ಭಾರಿ ಎಡವಟ್ಟು ಮಾಡಿದ್ದು, ಇತನ​ ವಿರುದ್ಧ ಪ್ರಕರಣ ಇದೀಗ ದಾಖಲಾಗಿದೆ.

ಗ್ರೇಟ್​ ನೋಯ್ಡಾದ ಸೆಕ್ಟರ್​ ಗಾಮಾ ಪ್ರದೇಶದಲ್ಲಿ ಇರುವ ಆನಂದ್ ಸ್ಪೆಕ್ಟ್ರಮ್​ ಆಸ್ಪತ್ರೆಯಲ್ಲಿ ನ.12 ರಂದು 7 ವರ್ಷದ ಬಾಲಕ ಯುಧಿಷ್ಠರ್​ನ ತಪ್ಪಾದ ಕಣ್ಣಿಗೆ ಚಿಕಿತ್ಸೆ ಮಾಡಿದ್ದಾರೆ. ಈ ಪ್ರಕರಣ ದೇಶದ್ಯಾಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ವೈದ್ಯಕೀಯ ಕ್ಷೇತ್ರದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿದೆ.

ಪ್ರಕರಣ ಹಿನ್ನೆಲೆ ಹೀಗಿದೆ

ಯುಧಿಷ್ಠಿರನ ಎಡಗಣ್ಣಿನಲ್ಲಿ ಪದೆಪದೇ ನಿರು ಬರುತ್ತಿತ್ತು. ಈ ಹಿನ್ನೆಲೆ ಪಾಲಕರು ಮಗನನ್ನು ಅನಂದ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ''ವೈದ್ಯ ಆನಂದ್​ ಶರ್ಮಾ ಬಾಲಕನ ಕಣ್ಣಿನಲ್ಲಿ ಚಿಕ್ಕದಾದ ಕಬ್ಬಿಣ ಲೋಹಕ್ಕೆ ಹೋಲುವ ವಸ್ತು ಇದೆ. ಅದನ್ನು ತಗೆಯಬೇಕಾದರೆ ಅಪರೇಷನ್​ ಮಾಡಬೇಕು. ಈ ಚಿಕಿತ್ಸೆಗೆ 45,000 ವೆಚ್ಚವಾಗಲಿದೆ'' ಎಂದು ಹೇಳಿದ್ದಾರೆ.

ಬಳಿಕ ಮಂಗಳವಾರದಂದು (ನ.12) ಬಾಲಕ ಕರೆತಂದ ಪಾಲಕರು ಅಪರೇಷನ್​ಗೆ ಒಪ್ಪಿದ್ದಾರೆ. ಅದೇ ದಿನ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮನೆಗೆ ಹಿಂದುರಿಗಿದ ಬಳಿಕ ತಾಯಿ ಗಮನಿಸಿದ್ದಾಳೆ. ಎಡಗಣ್ಣಿನ ಬದಲು ಬಲಗಣ್ಣಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ವೈದ್ಯರು 45 ಸಾವಿರ ರೂ. ಅಪರೇಷನ್​ಗೆ ತಗೆದುಕೊಂಡಿದ್ದು, ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಕಣ್ಣಿನಲ್ಲಿ ಇರುವ ಲೋಹ ತೆಗೆಯಾಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಯುಧಿಷ್ಠಿರ ತಂದೆ ಹೇಳಿದ್ದಾರೆ. ಈ ಹಿನ್ನಲೆ ಪಾಲಕರು ವೈದ್ಯ ಆನಂದ್​ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net