ನ್ಯೂಸ್

ಕೆಲಸ ಹುಡುಕಲು ಹೊದ ಪತಿಯನ್ನು ಬಿಟ್ಟು ಭಾವನ ಮದುವೆಯಾದ ಮಹಿಳೆ!: ಘಟನೆ ನಡೆದಿರೋದು ಎಲ್ಲಿ ಗೊತ್ತೆ? | Married

Married:ಗಂಡ ಕೆಲಸ ಹುಡುಕಲು ಮುಂಬೈಗೆ ತೆರಳಿದ ಬಳಿಕ ಹೆಂಡತಿ ತನ್ನ ಮೈದುನ (ಗಂಡನ ತಮ್ಮ) ಮದುವೆಯಾದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಸಂತ ಕಬೀರ್​ ಜಿಲ್ಲೆಯಲ್ಲಿ ನಡೆದಿದೆ ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಹೌದು, ಖುಷ್ಬೂ ಎಂಬ ಮಹಿಳೆ ಆರು ತಿಂಗಳ ಹಿಂದೆ ಹರಿಹರಪುರದಲ್ಲಿ ಕಲ್ಲು ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಬಳಿಕ ಗಂಡ ಆಕೆಯನ್ನು ಮನೆಯಲ್ಲಿರಿಸಿ ಕೆಲಸ ಹರಿಸಿ ಮುಂಬೈಗೆ ತೆರಳಿದ್ದಾನೆ. ಮನೆಯಲ್ಲಿದ್ದ ಆಕೆಗೆ ಹಾಗೂ ಮೈದುನ ಅಮಿತ್​​ ಜತೆ ಪ್ರೀತಿ ಚಿಗುರೊಡೆದಿದೆ.

ಈ ಇಬ್ಬರ ನಡುವೆ ಸಂಬಂಧ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಮತ್ತೆ ಊರಿಗೆ ಕರೆಯಿಸಿ ಇಬ್ಬರ ಕುಟುಂಬಗಳು ಒಪ್ಪಿಗೆ ನೀಡಿ ಮದುವೆ ಮಾಡಿಸಿದ್ದಾರೆ ಎಂದು ಹರಿಹರಪುರದ ನಗರ ಪಂಚಾಯತ್ ಅಧ್ಯಕ್ಷ ರವೀಂದ್ರ ಪ್ರತಾಪ್ ಶಾಹಿ ತಿಳಿಸಿದ್ದಾರೆ.

ಇನ್ನು ಮದುವೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಸಾಕ್ಷಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)