ನ್ಯೂಸ್

ಪ್ರಿಯಕರನ ಸಹಾಯದಿಂದ ಗಂಡನನ್ನೇ ಕೊಂದ ಪತ್ನಿ: ಮೀರತ್​ನಲ್ಲೊಂದು ಮನುಕುಲವೇ ಬೆಚ್ಚಿ ಬೀಳಿಸುವ ಸ್ಟೋರಿ!| Meerut

Meerut : ಹೆಂಡತಿ ತನ್ನ ಪ್ರಿಯಕರನ ಸಹಾಯದಿಂದ ತಿಂಗಳುಗಳ ಹಿಂದೆಯೇ ಪತಿಯನ್ನು ಕೊಂದು ಬಳಿಕ ಶವವನ್ನು ಡ್ರಮ್​ನಲ್ಲಿ ಮುಚ್ಚಿಟ್ಟು ಇಬ್ಬರೂ ಪರಾರಿಯಾಗಿರುವ ಘಟನೆ ಮೀರತ್​ನಲ್ಲಿ ಸೋಮವಾರ (ಆ.17) ರಂದು ನಡೆದಿದೆ.

ಉತ್ತರ ಪ್ರದೇಶದ ಶಹಜಹಾನ್‌ಪುರದ ಹಂಸ್ರಾಮ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಇನ್ನು ಈತ ತನ್ನ ಪತ್ನಿ ಸುನೀತಾ ಹಾಗೂ ಮೂವರು ಮಕ್ಕಳೊಂದಿಗೆ ಶಹಜಹಾನ್‌ಪುರದಲ್ಲಿ ವಾಸಿಸುತ್ತಿದ್ದ ಎಂದು ಮಾಹಿತಿ ತಿಳಿದು ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್​ 17ರಂದು ಬಾಡಿಗೆ ಮನೆಯಿಂದ ಕೊಳೆತ ದುರ್ವಾಸನೆ ಬರುವುದನ್ನು ನೆರೆಹೊರೆಯವರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಂಸ್ರಾಮ್​ ಅವರ ದೇಹವು ಛಾವಣಿಯ ಮೇಲೆ ಇರಿಸಲಾಗಿದ್ದ ಡ್ರಮ್​ ಒಳಗೆ ಲಾಕ್​ ಆಗಿರುವುದು ನೋಡಿದ್ದಾರೆ. ಇನ್ನು ಆತನ ದೇಹವು  ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾದ ಗುರುತುಗಳನ್ನು ಹೊಂದಿತ್ತು ಎನ್ನಲಾಗಿದೆ. ಇನ್ನು ದೇಹದ ಕೊಳವಿಕೆಯನ್ನು ತಪ್ಪಿಸಲು ದೇಹದ ಮೇಲೆ ಉಪ್ಪು ಹಚ್ಚಿರುವುದು ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಮೂಲಗಳ ಪ್ರಕಾರ, ಹಂಸ್ರಾಮ್​ ಇಟ್ಟಿಗೆ ಗೂಡುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಹಾಗೆ ಆಗ್ಗಾಗೆ ಮನೆಯ ಮಾಲೀಕನ ಮಗನಾದ ಜಿತೇಂದ್ರನೊಂದಿಗೆ ಕುಡಿಯುತ್ತಿದ್ದನು. ಇನ್ನು ಸುನೀತಾ ಹಾಗೂ ಆತನ ಪ್ರಿಯಕರ ಜಿತೇಂದ್ರ ಸೇರಿ ಹಂಸ್ರಾಮ್​ನನ್ನು ಕೊಂದು ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿ ಮಾಡಿದೆ.

ಸೋಮವಾರ (ಆ.18)ರಂದು ಪೊಲೀಸರು ಖೈರ್ತಾಲ್-ತಿಜಾರಾ ಜಿಲ್ಲೆಯಲ್ಲಿ ಆರೋಪಿಗಳಾದ ಜಿತೇಂದ್ರ ಹಾಗೂ ಸುನೀತಾಳನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದು, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)