ಹೊಸೂರು: ಪರಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆಯೊಬ್ಬಳು ದುರಂತ ಅಂತ್ಯ ಕಂಡ ಘಟನೆ ಹೊಸೂರು ತಾಲೂಕಿನಲ್ಲಿ ಸಂಭವಿಸಿದೆ.
ಚೆನ್ನಬಸಪ್ಪ ಎಂಬುವರ ಪತ್ನಿ ಗೌರಮ್ಮ(40) ಮೃತೆ. ಗಂಡನೊಂದಿಗೆ ವಾಸಿಸುತ್ತಿದ್ದ ಗೌರಮ್ಮಗೆ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ತಿಳಿದ ಚೆನ್ನಬಸಪ್ಪ, ಪತ್ನಿಗೆ ಹಲವು ಬಾರಿ ತಿಳಿಹೇಳಿದ್ದ. ಪರಪುರಷನ ಸಹವಾಸ ಬಿಡುವಂತೆ ಬುದ್ಧಿಮಾತು ಹೇಳಿದ್ದ. ನೀನಂದ್ರೆ ನನಗಿಷ್ಟ. ನೀನು ಇಂತಹ ಕೆಲಸಕ್ಕೆ ಇಳಿಯಬೇಡ ಎಂದು ಬೇಡಿಕೊಂಡಿದ್ದನಂತೆ. ಆದರೂ ಹಳೇ ಚಾಳಿ ಮುಂದುವರಿಸಿದ್ದಳು.
ಏ.29ರ ರಾತ್ರಿ ಗೌರಮ್ಮ ತನ್ನ ಪ್ರಿಯಕರನೊಂದಿಗೆ ಇರುವುದನ್ನ ಕಣ್ಣಾರೆ ಕಂಡ ಆಕೆಯ ಗಂಡ ಚೆನ್ನಬಸಪ್ಪ, ಪತ್ನಿಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ವೇಪನಪಲ್ಲಿ ಬಳಿಯ ಬಸವೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಭವಿಸಿದ್ದು, ಶುಕ್ರವಾರ ಬೆಳಗ್ಗೆ ಗಂಡನೇ ಹೊಸೂರು ಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಮೃತದೇಹವನ್ನ ಶವಾಗಾರಕ್ಕೆ ಸಾಗಿಸಿದರು.