

ಹಾಸನ: ಹೊತ್ತಿನ ಊಟಕ್ಕೂ ಗತಿಯಿಲ್ಲದೆ ವ್ಯಕ್ತಿಯೊಬ್ಬ ರಸ್ತೆಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನವನ್ನು ಹುಡುಕಿ ತಿನ್ನುತ್ತಿದ್ದ ಹೃದಯವಿದ್ರಾವಕ ಘಟನೆ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಉದ್ಯೋಗ ಕಸಿದುಕೊಂಡ ಲಾಕ್‌ಡೌನ್, ಊರು ತಲುಪಲು ವಾಹನಗಳೂ ಇಲ್ಲ, ಟ್ಯಾಕ್ಸಿಗಳಿಗೆ ಬಾಡಿಗೆ ನೀಡುವಷ್ಟು ಶ್ರೀಮಂತ ಸಹ ಅಲ್ಲ, ಹೊತ್ತಿನ ಊಟಕ್ಕೂ ಗತಿಯಿಲ್ಲದೆ ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದ ಅಗಳನ್ನು ಹುಡುಕಿ ಹಕ್ಕಿಯಂತೆ ತಿನ್ನುತ್ತಿದ್ದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್, ಮನೆಯಿಂದ ಅನ್ನ-ಸಾಂಬರು ತಂದು ರಾಜುಗೆ ಕೊಟ್ಟರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಿಬ್ಬಂದಿ ಜತೆ ಬಂದು ರಾಜು ಅವರಿಗೆ ಕರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು, ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.