ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಸಂಪುಟ ರಚನೆಯ ಜತೆಗೆ ಡಿಸಿಎಂ ಆಯ್ಕೆಯ ಕಸರತ್ತು ಶುರುವಾಗಿದೆ.
ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಸಿಎಂ ರಣತಂತ್ರ ಹೆಣೆದಿದ್ದರೂ, ಸಂಪುಟ ರಚನೆ ಸಂಪೂರ್ಣ ಹೈಕಮಾಂಡ್ ಅಣತಿಯಂತೆ ನಡೆಯಲಿದೆ ಎನ್ನಲಾಗಿದೆ. ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ನಿನ್ನೆಯಿಂದ ಮೂಲ ಮಾಜಿ ಸಚಿವರಗಿಂತ ವಲಸಿಗ ಮಾಜಿ ಸಚಿವರೇ ಮಾಜಿ ಸಿಎಂ ಬಿಎಸ್ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಾ ಗಿರಿಕಿ ಹೊಡೆಯುತ್ತಿದ್ದಾರೆ. ಇನ್ನು ನಾಲ್ವರು ವಲಸಿಗರನ್ನು ಹಾಗೂ ಸಚಿವರಾಗಿದ್ದ ಮೂಲ ಬಿಜೆಪಿಯ 9 ಮಂದಿಯನ್ನು ಕೈ ಬಿಡುವ ಬಗ್ಗೆ ಚಿಂತನೆ ನಡೆದೆ ಎಂಬ ಮಾಹಿತಿಯೂ ಲಭ್ಯವಾಗಿದೆ
ಸದ್ಯ ಬೊಮ್ಮಾಯಿ ಸಂಪುಟ ಸೇರಲಿರುವ ಸಂಭಾವ್ಯ ಸಚಿವರು ಪಟ್ಟಿ ಇಲ್ಲಿದೆ.
ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಯ್ಕೆಗೆ ಬಿಎಸ್ವೈ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.