ನ್ಯೂಸ್

ಊರು ತುಂಬೆಲ್ಲ ನೆರೆ ಆವರಿಸಿದ್ದರೂ ಕುಡಿವ ನೀರಿಲ್ಲ! ಪ್ಲೀಸ್​... ಕುಡಿಯೋಕೆ ನೀರು ಕೊಡಿ...

arunakunigal

ರಾಯಚೂರು: ದೇವದುರ್ಗ ತಾಲೂಕಿನ ಲಿಂಗದಳ್ಳಿಯಲ್ಲಿ ಧಾರಾಕಾರ ಮಳೆಯಾಗಿ ಊರು ತುಂಬೆಲ್ಲ ನೆರೆ ಆವರಿಸಿದ್ದರೂ ಇಲ್ಲಿನ ಜನರಿಗೆ ಕುಡಿವ ನೀರಿಗೂ ಹಾಹಾಕಾರ ಎದ್ದಿದೆ.

ನಾರಾಯಣಪುರ ಜಲಾಶಯದಿಂದ 3.5 ಲಕ್ಷ ಕ್ಯೂಸೆಕ್​ ನೀರನ್ನು ಹೊರ ಬಿಟ್ಟರೂ ಕುಡಿಯಲು ಒಂದು ಹನಿ ನೀರಿಲ್ಲ. ಕುಡಿವ ನೀರಿಗಾಗಿ ಮಕ್ಕಳು ಮತ್ತು ಮಹಿಳೆಯರು ಬಿಂದಿಗೆ ಹಿಡಿದು ನದಿಯತ್ತ ಹೊರಟ ದೃಶ್ಯ ಶನಿವಾರ ಕಂಡು ಬಂತು. ನಮಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.