COVID-19 ನಿಂದ ದೂರವಿರಲು ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಲು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ಎರಡು ಪುಟಾಣಿಗಳು ಒಂದೇ ಸಂದೇಶ ಸಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಕ್ ಮಾಡಲು ಹೋಗುವಾಗ ಇಬ್ಬರು ಪುಟ್ಟಾಣಿಗಳು ಮಾಸ್ಕ್ ಧರಿಸಿರುವ ದೃಶ್ಯಾವಳಿ ಅದರಲ್ಲಿದೆ. ಈ ವಿಡಿಯೋವನ್ನು ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಹಂಚಿಕೊಂಡಿದ್ದಾರೆ.
"ಮ್ಯಾಕ್ಸ್ ವೆಲ್ ಮತ್ತು ಫಿನ್ನೆಗನ್ ಮಾಸ್ಕ್ಗಳನ್ನು ಧರಿಸಿದ್ದಾರಾದರೆ.. ನೀವೂ ಮಾಸ್ಕ್ ಧರಿಸಿ ಆನಂದಿಸಬಹುದು..." ಎಂದು ಚಾಪ್ಮನ್ ವೀಡಿಯೊದೊಂದಿಗೆ ಬರೆದಿದ್ದಾರೆ.
ವೀಡಿಯೊದಲ್ಲಿ, ಮಾಸ್ಕ್ಗಳನ್ನು ತೆಗೆದುಹಾಕಲು ಯಾವುದೇ ರೀತಿ ಪ್ರಯತ್ನಿಸದೆ ಖುಷಿಯಿಂದಲೇ ಮಕ್ಕಳು ನಡೆದುಕೊಂಡು ಹೋಗುತ್ತಿರುವ ದೃಶ್ಯ ಇದೆ.
ವೈರಲ್ ಆದ ವೀಡಿಯೊ 2.2 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಪಟ್ಟಿದೆ, 1.38 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು 29,000 ರಿಟ್ವೀಟ್‌ಗಳನ್ನು ಗಳಿಸಿದೆ. ಹೆಚ್ಚಿನ ನೆಟ್ಟಿಗರು ವೀಡಿಯೊದಿಂದ ಪ್ರಭಾವಿತರಾಗಿದ್ದಾರೆ.
ಬಹಳಷ್ಟು ಪುಟ್ಟ ಮಕ್ಕಳು ಮಾಸ್ಕ್ಗಳನ್ನು ಯಾವುದೇ ಗಡಿಬಿಡಿಯಿಲ್ಲದೆ ಧರಿಸುವುದನ್ನು ನಾನು ಗಮನಿಸಿದ್ದೇನೆ. ಅವರ ಅಮ್ಮಂದಿರು, ಅಪ್ಪಂದಿರು, ಅಜ್ಜಿಯರೊಂದಿಗೆ ಸಂತೋಷದಿಂದ ಹೋಗುತ್ತಿದ್ದುದನ್ನು ಗಮನಿಸಿದ್ದಾಗಿ ಒಬ್ಬ ಬಳಕೆದಾರರು ಅನುಭವ ಹಂಚಿಕೊಂಡಿದ್ದಾರೆ. ವಯಸ್ಕರಿಗಿಂತ ಹೆಚ್ಚಾಗಿ ಪುಟಾಣಿಗಳೇ ಮಾಸ್ಕ್ಗೆ
ಹೊಂದಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.