ಶ್ರೀನಗರ: ರ‍್ಯಾಪ್ ಸಾಂಗ್ಗಳ ಮೂಲಕ ಜನರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿರುವ ರ‍್ಯಾಪ್ ಸ್ಟಾರ್ಗಳನ್ನ ನೋಡಿದ್ದೇವೆ. ವಿಶೇಷವೆನಿಸುವಂತೆ ಜಮ್ಮು ಕಾಶ್ಮೀರದಲ್ಲಿ ಜನ ಸೇವೆಗೆಂದು ಕಾಕಿ ತೊಟ್ಟಿರುವ ಪೊಲೀಸ್ ಪೇದೆಯೊಬ್ಬ ರ‍್ಯಾಪರ್ ಆಗಿದ್ದು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾನೆ.
ಮುಕೇಶ್ ಸಿಂಗ್ ಎನ್ನುವವರು ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೇದೆಯೊಬ್ಬ ರ‍್ಯಾಪ್ ಸಾಂಗ್ ಹೇಳುವ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪೇದೆ ರ‍್ಯಾಪ್ ಸಾಂಗ್ನ ಸಾಹಿತ್ಯವಾಗಿ ತನ್ನ ಬದುಕನ್ನೇ ಬಳಸಿಕೊಂಡಿದ್ದಾನೆ. ತಾನು ಕಂಡ ಕಷ್ಟ, ತನ್ನ ಕನಸು, ಕನಸಿಗಾಗಿ ನಿದ್ದೆ ಬಿಟ್ಟು ಶ್ರಮಿಸಿದ ಬಗೆ, ತನ್ನ ಮುಂದಿರುವ ಗುರಿಯನ್ನೇ ಆತ ಸಾಲುಗಳಾಗಿ ಪರಿವರ್ತಿಸಿದ್ದಾನೆ.
ಈ ವಿಡಿಯೋ ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್ಬುಕ್ನಲ್ಲಿಯೂ ಸಹ ಸೌಂಡ್ ಮಾಡುತ್ತಿದೆ. ನಿಜವಾದ ಪ್ರತಿಭೆ ಎಂದು ಅನೇಕರು ಹಾಡಿ ಹೊಗಳುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ವಿಡಿಯೋ ಹೊರಬಿದ್ದ ಒಂದೇ ದಿನದಲ್ಲಿ ಸಾವಿರಾರು ವೀಕ್ಷಣೆ ಪಡೆದುಕೊಂಡಿದೆ. (ಏಜೆನ್ಸೀಸ್)