ನ್ಯೂಸ್

VIDEO | ನಿಮ್ಮ ಕಣ್ಣು ಮೆದುಳಿಗೆ ಹೇಗೆ ಸಂಪರ್ಕಿಸುತ್ತದೆ ಗೊತ್ತಾ?; ಈ ವಿಡಿಯೋ ನೋಡಿ

ಬೆಂಗಳೂರು: ಪ್ರತಿಯೊಂದು ಜೀವಸಂಕುಲಗಳಿಗೆ ಕಣ್ಣು ಅತೀ ಮುಖ್ಯವಾದ ಅಂಗ. ಮುಖದ ಅವಿಭಾಜ್ಯ ಅಂಗವಾಗಿರುವ ಕಣ್ಣು ನಮ್ಮ ಮುಂದಿರುವ ಎಲ್ಲಾ ವಿಷಯಗಳನ್ನು ನೋಡುವ ಮೂಲಕ ಅದರ ಚಿತ್ರಣವನ್ನು ಮೆದುಳಿಗೆ ತಲುಪಿಸುವ ಅದ್ಭುತ ಕೆಲಸವನ್ನು ಮಾಡುತ್ತದೆ.

ನಮ್ಮ ಮುಖ ಭಾಗದಲ್ಲಿ ಅತೀ ಸೂಕ್ಷ್ಮವಾದ ಅಂಗ ಎಂದರೆ ಅದು ಕಣ್ಣು. ಎಲ್ಲಾ ವಿಷಯಗಳನ್ನು ಕ್ಯಾಮರಾದ ಲೆನ್ಸ್​ ರೀತಿ ಸೆರೆಹಿಡಿಯುವ ನಮ್ಮ ಕಣ್ಣುಗಳು, ಆ ವಿಷಯವನ್ನು ಮೆದುಳಿಗೆ ತಿಳಿಸುವ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿಯಲು ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಕಣ್ಣಿನ ಚಿತ್ರ ನೋಡಿ ಅದರ ಭಾಗಗಳು ಮತ್ತು ಅದರ ಕೆಲಸಗಳೇನು ಎಂಬುದನ್ನು ಕೇವಲ ಓದಿ ತಿಳಿದುಕೊಂಡಿದ್ದೇವೆ.

ನಮ್ಮ ಮುಂದಿರುವ ಪ್ರತಿಯೊಂದನ್ನು ನೋಡುವ ಕಣ್ಣುಗಳು ಅದನ್ನು ಹೇಗೆ ಮೆದುಳಿಗೆ ತಲುಪಿಸುತ್ತದೆ? ಅದರ ಕಾರ್ಯ ಹೇಗಿರುತ್ತದೆ ಎಂಬುದನ್ನು 'ಸೈನ್ಸ್'​ ಹೆಸರಿನ ಟ್ವಿಟರ್​ ಪುಟ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮುಖೇನ ಸರಳವಾಗಿ ತೋರಿಸಿದೆ. ಕೇವಲ 15 ನಿಮಿಷದ ಈ ವಿಡಿಯೋ ನೆಟ್ಟಿಗರಿಂದ ಒಂದು ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆ ಜತೆಗೆ ಅಧಿಕ ಅಭಿಪ್ರಾಯಗಳನ್ನು ಪಡೆದುಕೊಂಡಿದೆ.