ನ್ಯೂಸ್

ಜ್ಞಾನವಾಪಿ 'ಶಿವಲಿಂಗ' ಪ್ರಕರಣ​: ಅ.11ಕ್ಕೆ ಆದೇಶ ಮುಂದೂಡಿಕೆ

ವಾರಣಾಸಿ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾದ ಶೃಂಗಾರ ಗೌರಿ ಹಾಗೂ ಶಿವಲಿಂಗ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಬನ್​ ಡೇಟಿಂಗ್​ಗೆ ಅನುಮತಿ ಕೋರಿ ಹಿಂದುಗಳು ಸಲ್ಲಿರುವ ಅರ್ಜಿ ಸಂಬಂಧ ಅ.11ಕ್ಕೆ ವಾರಣಾಸಿ ಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಲಿದೆ.

ಮಸೀದಿಯೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕು. ಹಾಗೂ ಶಿವಲಿಂಗದ ವಯಸ್ಸನ್ನ ಅರಿಯಲು ಕಾರ್ಬನ್​ ಡೇಟಿಂಗ್​ ಪ್ರಕ್ರಿಯೆಯನ್ನು ಒಳಗೊಂಡಂತೆ ವೈಜ್ಞಾನಿಕ ತನಿಖೆ ನಡೆಸಬೇಕು. ಎಂದು ಮಹಿಳಾ ಅರ್ಜಿದಾರರು ಕಳೆದ ತಿಂಗಳು ಕೋರ್ಟ್​ನ ಮೊರೆ ಹೋಗಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್​, ಆದೇಶವನ್ನ ಕಾಯ್ದಿರಿಸಿ ಅ.11ಕ್ಕೆ ಮುಂದೂಡಿದೆ. ಅಂದು ಮಧ್ಯಾಹ್ನ 2ಕ್ಕೆ ಆದೇಶ ಪ್ರಕಟವಾಗಲಿದೆ.