ನ್ಯೂಸ್

ನಾಳೆಯಿಂದ ಆಂಧ್ರ, ತೆಲಂಗಾಣಕ್ಕೂ ರಾಜ್ಯದಿಂದ ಬಸ್ ಸಂಚಾರ

arunakunigal

​ಬೆಂಗಳೂರು: ರಾಜ್ಯದಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೈಸೂರು ಹೊರತುಪಡಿಸಿ ರಾಜ್ಯಾದ್ಯಂತ ಇಂದಿನಿಂದ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭಗೊಂಡಿದ್ದು, ನಾಳೆಯಿಂದ (ಜೂ.22) ಅಂತಾರಾಜ್ಯ ಬಸ್​ ಸಂಚಾರ ಶುರುವಾಗಲಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಹೊರಡಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಕೋವಿಡ್ ಮಾರ್ಗಸೂಚಿ ನಿಯಮದೊಂದಿಗೆ ಜೂ.22ರಂದು ಬಸ್​ ಸೇವೆ ಆರಂಭಗೊಳ್ಳಲಿದೆ. ಪ್ರತಿ ಬಸ್ಸಿನಲ್ಲಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಬಸ್​ ಸಂಚರಿಸಲಿದೆ. ಬಸ್​ನಲ್ಲಿ ಪ್ರಯಾಣ ಮಾಡುವವರು ಕೋವಿಡ್​ ನಿಯಮ ಪಾಲನೆ ಮಾಡುವುದು ಕಡ್ಡಾಯ.

ಇತ್ತ ರಾಜಧಾನಿ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಕೂಲಿ ಕಾರ್ಮಿಕರು, ನೌಕರರು, ಕೆಲಸಗಾರರು ಗಂಟುಮೂಟೆ ಸಮೇತ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದಾರೆ.