ನ್ಯೂಸ್

ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆ: 2 ಲಕ್ಷ ಅಂಗನವಾಡಿ ಮೇಲ್ದರ್ಜೆಗೆ

ನವದೆಹಲಿ: ಕೇಂದ್ರ ಬಜೆಟ್​ನಲ್ಲಿ 'ನಾರಿ ಶಕ್ತಿ'ಯ ಪ್ರಾಮುಖ್ಯತೆಯನ್ನು ಗುರುತಿಸಿ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆಯನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

'ಮಿಷನ್ ಪೋಷಣ್ 2.0', 'ಮಿಷನ್ ವಾತ್ಸಲ್ಯ' ಮತ್ತು 'ಮಿಷನ್ ಶಕ್ತಿ' ಎಂಬ 3 ಯೋಜನೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮಿಷನ್​ ಪೋಷನ್​ ಯೋಜನೆಯಡಿ ಮಕ್ಕಳಿಗಾಗಿ 'ಸಕ್ಷಮ್ ಅಂಗನವಾಡಿ' ರೂಪಿಸಲಾಗಿದ್ದು, ದೇಶಾದ್ಯಂತ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಅಂಗನವಾಡಿಗಳಿಗೆ ಆಡಿಯೋ ಮತ್ತು ವಿಡಿಯೋ ವ್ಯವಸ್ಥೆ ಸೌಲಭ್ಯ ಒದಗಿಸಿ, ಮಕ್ಕಳ ಬೆಳವಣಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹಾಗೂ ಮಹಿಳಾ ಅಭಿವೃದ್ಧಿಗೆ ಯೋಜನೆಗಳ ಪರಿಷ್ಕರಣೆ ಬಗ್ಗೆ ನಿರ್ಮಲಾ ಸೀತಾರಾಮನ್​ ತಿಳಿಸಿದರು.