ನ್ಯೂಸ್

ಆನೆಗೆ ಬಿಯರ್​ ಕುಡಿಸಿ ಹುಚ್ಚಾಟ ಮೆರೆದ ಪ್ರವಾಸಿಗ! ವಿಡಿಯೋ ವೈರಲ್​ | Elephant

Elephant: ಕೀನ್ಯಾದಲ್ಲಿ ಸ್ಪ್ಯಾನಿಷ್​ ದೇಶದ ಪ್ರವಾಸಿಗನೊಬ್ಬ ಆನೆಯ ಸೊಂಡಿಲಿಗೆ ಬಿಯರ್​ ಸುರಿದು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ​ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋದಲ್ಲೇನಿದೆ?

ಕೀನ್ಯಾದ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸಿಗ ಭೇಟಿ ನೀಡಿದ್ದು, ಅಲ್ಲಿ ಬಿಯರ್​ ಟಸ್ಕರ್​ನ್ನು ಕುಡಿದು, ಉಳಿದ ಬಿಯರ್​ನ್ನು ಆನೆಗೆ ಕುಡಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.

ಈಗ ಅಳಿಸಲಾದ ಇನ್​ಸ್ಟಾಗ್ರಾಮ್​ ಪೋಸ್ಟ್ ನಲ್ಲಿ "ದಂತ ಸ್ನೇಹಿತನೊಂದಿಗೆ ಆನೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು @skydive_kenya ಎಂಬ ಬಳಕೆದಾರ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದನು. ಹಿಂಸಾತ್ಮಕ ಕಮೆಂಟ್​ಗಳ ನಂತರ ಆ ವ್ಯಕ್ತಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಳಿಸಿಹಾಕಿದ್ದಾನೆ.

ವಿಡಿಯೋದಲ್ಲಿರುವ ಆನೆಯನ್ನು ಬೂಪ ಎಂದು ಗುರುತಿಸಲಾಗಿದೆ. ಇದು ಗಂಡು ಆನೆಯಾಗಿದ್ದು, 1989 ರಲ್ಲಿ ಎಂಟನೇ ವಯಸ್ಸಿನಲ್ಲಿ ಆನೆಯನ್ನು ಅಭಯಾರಣ್ಯಕ್ಕೆ ತಂದಿದ್ದಾರೆ. ಇನ್ನು ಈ ದೃಶ್ಯವನ್ನು ಓಲ್ ಜೋಗಿ ಕನ್ಸರ್ವೆನ್ಸಿಯಲ್ಲಿ ಚಿತ್ರಿಸಲಾಗಿದ್ದು,ಈ ಸಂಬಂಧ ಕೀನ್ಯಾದ ಅಧಿಕಾರಿಗಳು ಪ್ರವಾಸಿಗನನ್ನು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)