Prediction : ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೋ ಅಥವಾ ಕಾಂಗ್ರೆಸ್ ಪಕ್ಷ ಒಡೆದು ಬ್ಲಾಸ್ಟ್ ಆಗೊತ್ತೋ ಕಾದು ನೋಡಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ನಡೆದ ಜನಾಕ್ರೋಶ ರ್ಯಾಲಿಯಲ್ಲಿ ಮಾತನಾಡಿದ ಅಶೋಕ, '' ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಭಾಗಿಯಾಗಲು ಸಾಧ್ಯವಿಲ್ಲ ಎಂದರು''.
ಕಾಂಗ್ರೆಸ್ ಸರ್ಕಾರದಲ್ಲಿ ಎರಡುವರೆ ವರ್ಷ ಟೈಂ ಬಾಂಬ್ ಈಗಾಗಲೇ ಫಿಕ್ಸ್ ಆಗಿದೆ. ಅದು ನವಂಬರ್ನಲ್ಲಿ ಸ್ಫೋಟಗೊಳ್ಳುತ್ತೆ. ಅದು ಸ್ಫೋಟಗೊಂಡಾಗ ಸರ್ಕಾರ ಉರುಳುತ್ತೋ ಅಥವಾ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಮನೆಗೆ ಹೋಗ್ತಾರೋ ಗೊತ್ತಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯನವರು ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಅಶೋಕ ಕಿಡಿಕಾರಿದ್ದಾರೆ. ಇಲ್ಲಿ ಬಹುಸಂಖ್ಯಾತರು ಹಿಂದೂಗಳಿದ್ದಾರಾ? ಮುಸ್ಲಿಮರಿದ್ದಾರಾ ನನಗೆ ಗೊತ್ತಾಗ್ತಿಲ್ಲ. ಇಂದು ಮುಸ್ಲಿಮರ ಓಲೈಕೆ ಮಾಡುವ ಮೂಲಕ ಮಿನಿ ಪಾಕಿಸ್ತಾನಗಳನ್ನು ಉತ್ಪತ್ತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.