ಹೊಸಕೋಟೆ: ಹಿಂದಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇಗುಲದಲ್ಲಿ ನಿಧಿ ಶೋಧಕ್ಕೆ ಹೋದ 8 ಜನರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೆಂ.ಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಯ ಹಿಂದಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿಧಿ ಇದೆಯೆಂದು ಅದನ್ನು ಹುಡುಕಿ ದೋಚಿಕೊಂಡು ಹೋಗಲೆಂದು ಸಂಚು ರೂಪಿಸಿದ್ದ 8 ಜನರ ತಂಡ ಗುರುವಾರ ತಡರಾತ್ರಿ ಬಂದಿತ್ತು. ನಿಧಿಗಾಗಿ ದೇಗುಲದ ನೆಲವನ್ನು ಅಗೆಯುತ್ತಿದ್ದ ದುಷ್ಕರ್ಮಿಗಳ ಮೇಲೆ ಕಲ್ಲಿನ ಮಂಟಪ ಕುಸಿದಿದ್ದು, ಹಿಂದಿಗನಾಳ ಗ್ರಾಮದ ಸುರೇಶ್ (22) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿರಿ ಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ
ನಿಧಿ ಆಸೆಗೆ ಹೋಗಿ ಪ್ರಾಣಬಿಟ್ಟ ಘಟನೆ ಇಡೀ ಗ್ರಾಮವನ್ನೇ ಬಿಚ್ಚಿಬೀಳಿಸಿದ್ದು, ಮಾಡಬಾರದ್ದನ್ನು ಮಾಡಲು ಹೋದರೆ ಆ ದೇವರು ಕೊಡೋ ಶಿಕ್ಷೆ ಭಯಾನಕ ಎಂದೆಲ್ಲ ಜನರು ಚರ್ಚಿಸುತ್ತಿದ್ದಾರೆ.