ನ್ಯೂಸ್

ಪಾಕಿಸ್ತಾನದ ಮೇಲೆರಗಿತು ಭಾರತದ ಕ್ಷಿಪಣಿ; ನಿಜಕ್ಕೂ ಆಗಿದ್ದೇನು?

ನವದೆಹಲಿ: ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದ ಮೇಲೆರಗಿದ ಪ್ರಕರಣವೊಂದು ನಡೆದಿದೆ. ಈ ಕುರಿತು ರಕ್ಷಣಾ ಸಚಿವಾಲಯವೇ ಸ್ಪಷ್ಟನೆಯೊಂದನ್ನು ಹೊರಡಿಸಿದೆ.

ಮಾ.9ರಂದು ಎಂದಿನಂತೆ ನಿರ್ವಹಣೆ ವೇಳೆ ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯೊಂದು ಪಾಕಿಸ್ತಾನದ ಮೇಲೆರಗಿದೆ. ಇದೊಂದು ವಿಷಾದಕರ ಘಟನೆ ಎಂದಿರುವ ರಕ್ಷಣಾ ಸಚಿವಾಲಯ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬುದನ್ನೂ ಹೇಳಿದೆ.

ಅಲ್ಲದೆ ಇದೊಂದು ಆಕಸ್ಮಿಕ ಘಟನೆಯಾದರೂ ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಿದೆ.