ಚಿತ್ರದುರ್ಗ: ಕೂಲಿ ಕೆಸಲಕ್ಕೆಂದು ಹೊರಟ್ಟಿದ್ದವರ ಮೇಲೆ ಮಾರ್ಗಮಧ್ಯೆ ಜವರಾಯ ಅಟ್ಟಹಾಸ ಮೆರೆದಿದ್ದು, 6 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ನೂರಮೂರು ಕ್ರಾಸ್ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಹಿರಿಯೂರಿನಿಂದ ಚಳ್ಳಕೆರೆಗೆ ಕಾಂಕ್ರಿಟ್ ಕೆಲಸಕ್ಕಾಗಿ ಟಾಟಾ ಏಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ನೂರಮೂರು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಏಸ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಹಿರಿಯೂರಿನ ವೇದಾವತಿ ನಗರದ ತಮಿಳು ಕಾಲನಿಯ ಸೆಲ್ವಿ (35), ದೀಪಿಕಾ(6) ಮತ್ತು ನೀಲಮ್ಮ(29) ಮೃತಪಟ್ಟಿದ್ದಾರೆ. 9 ಜನರ ಸ್ಥಿತಿ ಗಂಭೀರವಾಗಿದ್ದು, ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿರಿ ಕೋವಿಡ್ ಭೀತಿಗೆ ಬಾರದ ಸಂಬಂಧಿಕರು: ಹಿಂದು ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು