ಕೊಡಗು: 7ನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಸೋಲುಂಟಾದ ಆಘಾತಕ್ಕೆ ಕೊಡಗಿನಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ.
ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ನಿವಾಸಿ ಡಿ.ಎ.ಉದಯ ಮೃತರು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ಟಿ20 ವಿಶ್ವಕಪ್ ಕ್ರಿಕೆಟ್ ನಡೆಯಿತು.
ಈ ಮ್ಯಾಚ್ನ್ನು ಮನೆಯಲ್ಲೇ ಕುಳಿತು ಟಿವಿ ಮೂಲಕ ಉದಯ ನೋಡುತ್ತಿದ್ದರು. ಪಂದ್ಯ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ವಿಚಲಿತರಾದ ಉದಯ್ಗೆ ಪಾಕ್ ವಿರುದ್ಧ ಭಾರತ ತಂಡಕ್ಕೆ ಸೋಲಾಗುತ್ತಿದ್ದಂತೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.