ನ್ಯೂಸ್

ಚಲಿಸುತ್ತಿದ್ದ ಬುಲೆಟ್ ರೈಲನ್ನೇ ನಿಲ್ಲಿಸಿದ ಹಾವು! ಇದು ಹೇಗೆ ಸಾಧ್ಯ| Bullet Trains

ಹಾವೊಂದು ಓವರ್‌ಹೆಡ್ ವಿದ್ಯುತ್​ ತಂತಿಗೆ ಸಿಲುಕಿ ಹಾಕಿಕೊಂಡ ಪರಿಣಾಮದಿಂದ ಟೋಕಿಯೊ ಮತ್ತು ಒಸಾಕಾವನ್ನು ಸಂಪರ್ಕಿಸುವ ಜಪಾನ್‌ನ ಅತಿ ವೇಗದ ಬುಲೆಟ್ ರೈಲು ಸ್ಥಗಿತಗೊಂಡಿದೆ.

Japan| ಮಳೆ ಹಾಗೂ ಇನ್ನಿತರ ಕೆಲವೊಂದು ಕಾರಣಗಳಿಂದ ರೈಲು ತನ್ನ ಸಮಯದಲ್ಲಿ ವಿಳಂಬ ಮಾಡುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲಿನ ರೈಲು ಹಾವು ಮಾಡಿದ ಪಜೀತಿಯಿಂದ ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡಿದೆ.

39 ಇಂಚಿನ ಹಾವು ಓವರ್‌ಹೆಡ್ ವಿದ್ಯುತ್ ತಂತಿಗೆ ಸಿಕ್ಕಿಕೊಂಡ ಪರಿಣಾಮ, ಒಂದೂವರೆ ಗಂಟೆಗೂ ಹೆಚ್ಚು ಸಮಯ ವಿಳಂಬವಾಯಿತು ಎಂದು ಆಪರೇಟರ್ ತಿಳಿಸಿದ್ದಾರೆ.

ಏಪ್ರಿಲ್ 30 ರ ಬುಧವಾರ ಸಂಜೆ 5.25 ರ ಸುಮಾರಿಗೆ ಗಿಫು-ಹಶಿಮಾ ಮತ್ತು ಮೈಬರಾ ನಿಲ್ದಾಣದ ನಡುವೆ ಈ ಘಟನೆ ಸಂಭವಿಸಿದ್ದು, ಜಪಾನಿನ ರಾಜಧಾನಿ ಮತ್ತು ಒಸಾಕಾ ನಗರಕ್ಕೆ ಹೋಗುವ ರೈಲು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು ಎಂದು ಹೇಳಲಾಗಿದೆ.

(ಏಜೆನ್ಸೀಸ್)

ಪ್ರತಿದಿನ 430,000 ಕ್ಕೂ ಹೆಚ್ಚು ಪ್ರಯಾಣಿಕರು ಟೊಕೈಡೊ ಶಿಂಕನ್ಸೆನ್‌ನಲ್ಲಿ ಪ್ರಯಾಣಿಸುತ್ತಾರೆ. ಇದು ಜಪಾನಿನ ರಾಜಧಾನಿ ಟೋಕಿಯೊವನ್ನು ನಗೋಯಾ ಮತ್ತು ಒಸಾಕಾದೊಂದಿಗೆ ಸಂಪರ್ಕಿಸುತ್ತದೆ. ಬುಲೆಟ್ ರೈಲುಗಳು 180 mph ವೇಗವನ್ನು ತಲುಪುವುದಕ್ಕೆ ಮತ್ತು ಅವುಗಳ ಸಮಯಪಾಲನೆಗೆ ಹೆಸರುವಾಸಿಯಾಗಿವೆ.