ಮುಂಬೈ: ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್' ಬಿಡುಗಡೆ ಹಿನ್ನೆಲೆಯಲ್ಲಿ ಅವರ ಮುಂಬೈನ ನಿವಾಸದ ಮುಂದೆ ಅಭಿಮಾನಿಗಳು ನೆರೆದಿದ್ದು, ಇದೇ ವೇಳೆ ಅವರ ಮನೆಯ ಜವಾನ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.
ನಟ ಶಾರುಖ್ ಖಾನ್ನ ಮುಂಬೈ ನಿವಾಸ ಮನ್ನತ್ನ ಎದುರುಗಡೆ ಚಾಯ್ವಾಲ್ನೊಬ್ಬನಿಗೆ ಭದ್ರತಾ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ ಪ್ರಸಂಗ ನಡೆದಿದೆ. ಈ ಮನೆ ಮುಂದೆ ಚಹಾ ಮಾರಬಾರದು ಎಂದು ಹೇಳಿದ ಆತ ಚಾಯ್ವಾಲ್ನ ಫ್ಲಾಸ್ಕ್ ಕಸಿದುಕೊಂಡು ಟೀಯನ್ನು ರಸ್ತೆಗೆ ಚೆಲ್ಲಿದ್ದಾನೆ.
ಬಡಪಾಯಿ ಚಾಯ್ವಾಲಾನ ಜೀವನೋಪಾಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಶಾರುಖ್ ಮನೆಯ ಭದ್ರತಾ ಸಿಬ್ಬಂದಿ ಎನ್ನಲಾದ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.