ನ್ಯೂಸ್

ಶಾಲೆ‌ ಆರಂಭದ ಸಂಭ್ರಮೋತ್ಸವ: ನೃತ್ಯ, ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳ ಮೆರವಣಿಗೆ

ಚಾಮರಾಜನಗರ: ಇಂದಿನಿಂದ ಶಾಲೆ ಆರಂಭಗೊಂಡಿದ್ದು, ಜಿಲ್ಲೆಯ ವಿವಿಧ‌ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ವಿಭಿನ್ನ ಮತ್ತು ವಿಶೇಷವಾಗಿ ಸ್ವಾಗತಿಸಿದರು.

ಗುಂಡ್ಲುಪೇಟೆ ತಾಲೂಕಿನ‌ ನೇನೆಕಟ್ಟೆ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಎತ್ತಿನಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಚಾಮರಾಜನಗರದ‌ ಸಂತಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ವೀರ ಮಕ್ಕಳ ಕುಣಿತ ಹಾಕಿ ಸಂಭ್ರಮಿಸಿದರು. ಇತರಡೆ ಗುಲಾಬಿ ಹೂ, ಪುಸ್ತಕ ಕೊಟ್ಟು, ಸಿಹಿ ಹಂಚಿ ಸ್ವಾಗತ ಕೋರಲಾಗಿದೆ. ಜಿಲ್ಲಾ‌ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಹಲವು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿದರು.