ನ್ಯೂಸ್

ರಾತ್ರೋರಾತ್ರಿ ಕಾಂಗ್ರೆಸ್ ಕಚೇರಿಯಲ್ಲಿ ರಾರಾಜಿಸಿದ ಸಾವರ್ಕರ್​ ಫೋಟೋ!

ವಿಜಯಪುರ: ರಾಜ್ಯಾದ್ಯಂತ ಸಾವರ್ಕರ್ ಫೋಟೋ-ಫ್ಲೆಕ್ಸ್​ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ರಾತ್ರೋರಾತ್ರಿ ಅವರ ಫೋಟೋ ರಾರಾಜಿಸಿದೆ.

ಇದೇನಪ್ಪ‌ ವಿಚಿತ್ರ ಅಂತೀರಾ? ಹೌದು, ಕಾಂಗ್ರೆಸ್ ನಾಯಕರು ಸಾವರ್ಕರ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ಆ ಪಕ್ಷದ ಕಚೇರಿ ಸುತ್ತಾ ಸಾವರ್ಕರ್ ಫೋಟೋಗಳೇ ಇದ್ದವು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರಿ ಕೆಲವರು ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ. ಕಟ್ಟಡದ ಸುತ್ತ ಸಾರ್ವಕರ್ ಫೋಟೋಗಳು ಇರುವುದನ್ನು ಕಂಡು ಸುತ್ತಮುತ್ತಲ ಜನ ಅಚ್ಚರಿಗೊಂಡಿದ್ದಾರೆ.

ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲು, ಬೋರ್ಡ್​ಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ.