ನ್ಯೂಸ್

ಅನ್​ಲಾಕ್​ ಬೆನ್ನಲ್ಲೇ ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ಪ್ರವಾಸಿಗರ ಪ್ರವೇಶ ನಿಷಿದ್ಧ!

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅನ್​ಲಾಕ್​ ಶುರುವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಸಾವುರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕರೊನಾ ಸೋಂಕನ್ನು ಲೆಕ್ಕಿಸದೆ ಲಗ್ಗೆ ಇಟ್ಟಿದ್ದರು. ಕಳೆದ ಶನಿವಾರ ಮತ್ತು ಭಾನುವಾರ ನಂದಿ ಗಿರಿಧಾಮ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಸೂರ್ಯೋದಯಕ್ಕೂ ಮುನ್ನವೇ ನೂರಾರು ಬೈಕ್ ಮತ್ತು ಕಾರಿನಲ್ಲಿ ನಂದಿ ಹಿಲ್ಸ್​ಗೆ ನಾ ಮುಂದು, ತಾ ಮುಂದು ಎಂಬಂತೆ ಬಂದಿದ್ದರು, ಮುಂದಿನ ವೀಕೆಂಡ್​ಗೂ ಹೋಗಬೇಕೆಂದು ಲೆಕ್ಕವಿಲ್ಲದಷ್ಟು ಮಂದಿ ಪ್ಲಾನ್​ ಮಾಡಿಕೊಂಡಿದ್ದಾರೆ. ಆದರೆ ಇದೀಗ ವಿಕೇಂಡ್​ ಪ್ರವಾಸಕ್ಕೆ ಬ್ರೇಕ್​ ಹಾಕಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ.

ಕರೊನಾ ಸೋಂಕಿನ ಭೀತಿಯನ್ನೂ ಮರೆತು ಸಾವಿರಾರು ಮಂದಿ ಒಮ್ಮೆಲೆ ನಂದಿ ಬೆಟ್ಟಕ್ಕೆ ಭೇಟಿ ಕೊಟ್ಟದ್ದು, ಸಾಮಾಜಿಕ ಅಂತರ, ಮಾಸ್ಕ್​ ಧರಿಸುವಿಕೆ ನಿಯಮವನ್ನು ಹಲವರು ಪಾಲಿಸದಿರುವುದು ಕರೊನಾ ಸೋಂಕು ಹೆಚ್ಚಳದ ಭೀತಿಯನ್ನು ಮೂಡಿಸಿದೆ, ಹಾಗಾಗಿ ಇದಕ್ಕೆ ಬ್ರೇಕ್​ ಹಾಕಲು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರು, ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿದೆ,

ಮುಂದಿನ ಆದೇಶದವರೆಗೂ ಪ್ರತಿ ಶುಕ್ರವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ ಹೇರಲಾಗಿದೆ. ವೀಕೆಂಡ್ ಡೇ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.