ಉಡುಪಿ(ಕಾರ್ಕಳ): ಮನೆಯಲ್ಲಿ ಇಲಿ ಪಾಷಾಣ ಇದ್ದಲ್ಲಿ ಜೋಕೆ! ಪೇಸ್ಟ್ ರೂಪದಲ್ಲಿ ಇರುವ ಪಾಷಾಣವನ್ನು ಯಾರ ಕೈಗೂ ಸಿಗದಂತೆ ಇಡಿ, ಇಲ್ಲವಾದಲ್ಲಿ ದೊಡ್ಡವರೂ ಆಕಸ್ಮಿಕವಾಗಿ ಅದನ್ನು ಬಳಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬಹುದು ಎಂಬುದಕ್ಕೆ ಕಾರ್ಕಳದ ವೃದ್ಧೆಯೊಬ್ಬರ ದುರಂತ ಸಾವೇ ಜೀವಂತ ಸಾಕ್ಷಿ.
ಕಾರ್ಕಳ ಕಾಬೆಟ್ಟಿನ ಕಲಾವತಿ(61) ಎಂಬುವರ ಮನೆಯಲ್ಲಿ ಇಲಿ ಪಾಷಾಣದ ಪೇಸ್ಟ್ ಇತ್ತು. ಅದನ್ನು ಹಲ್ಲು ಉಜ್ಜುವ ಪೇಸ್ಟ್ ಎಂದು ತಪ್ಪಾಗಿ ಗ್ರಹಿಸಿದ ವೃದ್ಧೆ, ಆ.22ರಂದು ಅದರಲ್ಲಿ ಹಲ್ಲು ಉಜ್ಜಿಬಿಟ್ಟಿದ್ದರು. ಇದಾದ ಕೆಲವೇ ಕ್ಷಣದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು. ಕುಟುಮಬಸ್ಥರು ವಿಚಾರಿಸಿದಾಗ ಅದು ಹಲ್ಲುಜ್ಜುವ ಪೆಸ್ಟ್ ಅಲ್ಲ, ಇಲಿ ಪಾಷಾಣ ಎಂಬುದು ಗೊತ್ತಾಗಿದೆ.
ಕೂಡಲೇ ವೃದ್ಧೆ ಕಲಾವತಿಯನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನಿನ್ನೆ (ಸೆ.1) ಕೊನೆಯುಸಿರೆಲೆದರು. ಕಾರ್ಕಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.