Dark comet theory: ಭೌತಶಾಸ್ತ್ರದ ಲೆಕ್ಕಾಚಾರಗಳನ್ನೇ ಉಲ್ಟಾಪಲ್ಟಾ ಮಾಡಿದೆ '1998 KY26' ಕ್ಷುದ್ರಗ್ರಹ.. ಸುಮಾರು 11 ಮೀಟರ್ ಅಗಲವಿರುವ ಈ ಸಣ್ಣ ಬಾಹ್ಯಾಕಾಶ ಕಲ್ಲು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹಠಾತ್ತನೆ ಚುರುಕಾಗಿ ಓಡಲು ಶುರುಮಾಡಿದ್ದು ವಿಜ್ಞಾನಿಗಳನ್ನು ಅಚ್ಚರಿಗೆ ತಳ್ಳಿದೆ. ಇಷ್ಟೇ ಅಲ್ಲ, ಇದು ಪ್ರತಿ 5.35 ನಿಮಿಷಕ್ಕೊಮ್ಮೆ ಸಂಪೂರ್ಣವಾಗಿ ತನ್ನ ಕಕ್ಷೆಯಲ್ಲಿ ತಿರುಗುತ್ತದೆ.
ಕ್ಷುದ್ರಗ್ರಹಗಳು ಹಠಾತ್ತನೆ ವೇಗ ಹೆಚ್ಚಿಸಿಕೊಂಡಾಗ ವಿಜ್ಞಾನಿಗಳ ಗಮನ ‘ಡಾರ್ಕ್ ಕಾಮೆಟ್’ ಕಡೆಗೆ ಹರಿಯುತ್ತದೆ. ಅಂದರೆ, ಕ್ಷುದ್ರಗ್ರಹದ ಒಳಗಿರುವ ಮಂಜುಗಡ್ಡೆ ಕರಗಿ ಅನಿಲವಾಗಿ ರಾಕೆಟ್ನಂತೆ ನೂಕಲ್ಪಡುತ್ತಿರಬಹುದು ಎಂಬುದು ಇವರ ಊಹೆ.
ಆದರೆ, 'ಐಕಾರಸ್' (Icarus) ಜರ್ನಲ್ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯ ಪ್ರಕಾರ, ಈ 1998 KY26 ಕ್ಷುದ್ರಗ್ರಹದ ಮೇಲ್ಮೈ ತಾಪಮಾನವು ಅತ್ಯಂತ ಬಿಸಿಯಾಗಿದ್ದು, ಅಲ್ಲಿ ಹಿಮ ಇರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಈ ವೇಗಕ್ಕೆ ಮೂಲ ಕಾರಣ ಏನೆಂಬುದು ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿದೆ.
ಈ ನಿಗೂಢ ಕ್ಷುದ್ರಗ್ರಹದ ನೈಜ ಸತ್ಯವನ್ನು ತಿಳಿಯಲು ಜಪಾನ್ನ ಬಾಹ್ಯಾಕಾಶ ಸಂಸ್ಥೆ (JAXA) ತನ್ನ 'ಹಯಾಬುಸಾ-2' (Hayabusa2) ನೌಕೆಯನ್ನು ಇದರತ್ತ ಕಳುಹಿಸಿದೆ. ಈ ನೌಕೆಯು 2031ರ ಜುಲೈ ಸುಮಾರಿಗೆ ಈ ಕ್ಷುದ್ರಗ್ರಹವನ್ನು ತಲುಪಲಿದ್ದು, ಅಲ್ಲಿಯವರೆಗೆ ಈ 1998 KY26 ಕ್ಷುದ್ರಗ್ರಹವು ವಿಜ್ಞಾನಿಗಳಿಗೆ ದೊಡ್ಡ ಕೌತುಕವಾಗಿಯೇ ಇರಲಿದೆ.