ನ್ಯೂಸ್

ಪ್ರಶ್ನೆಪತ್ರಿಕೆ ಲೀಕ್​: ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಕೋಲಾರ: ಇಂದು ನಡೆಯಬೇಕಿದ್ದ ಬಿಕಾಂ ಮತ್ತು ಬಿಸಿಎ ಗಣಿತ ವಿಷಯದ ಪರೀಕ್ಷೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮುಂದೂಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಿರುವುದಾಗಿ ಬೆಂಗಳೂರು ಉತ್ತರ ವಿವಿಯ ಪ್ರಶ್ನೆ ಪತ್ರಿಕೆ ವಿಭಾಗದ ರಿಜಿಸ್ಟ್ರಾರ್​ ಡಾಮಿನಿಕ್ ತಿಳಿಸಿದ್ದಾರೆ. ಎಂದಿನಂತೆ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಮುಂದೂರಿಕೆ ಹಿನ್ನೆಲೆ ವಾಪಸ್ ಮನೆಗಳಿಗೆ ತೆರಳಿದರು.